Tuesday, January 19, 2021
Home ಅಂತರ್ ರಾಷ್ಟ್ರೀಯ ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಪಾಕ್‌ ಸರ್ಕಾರ ಅನುಮತಿ

ಇದೀಗ ಬಂದ ಸುದ್ದಿ

ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಪಾಕ್‌ ಸರ್ಕಾರ ಅನುಮತಿ

 ಲಾಹೋರ್‌: ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಸ್ಥಾನ ನಿರ್ಮಿಸಲು ಪಾಕಿಸ್ತಾನ ಸರ್ಕಾರವು ಅನುಮತಿ ನೀಡಿದೆ.

ಈ ಹಿಂದೆ ಇಸ್ಲಾಂ ಸಮುದಾಯಗಳ ಒತ್ತಡದಿಂದಾಗಿ ದೇವಸ್ಥಾನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಆದರೆ ಇದೀಗ ನಿರ್ಮಾಣ ಕಾರ್ಯ ಸ್ಥಗಿತಗೊಂಡ ಆರು ತಿಂಗಳ ಬಳಿಕ ದೇವಸ್ಥಾನ ನಿರ್ಮಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಅಷ್ಟೇ ಅಲ್ಲದೆ ಇಸ್ಲಾಮಾಬಾದ್‌ನ ಹೆಚ್ -9 / 2 ಸೆಕ್ಟರ್‌ನಲ್ಲಿ ಹಿಂದೂ ಸಮುದಾಯದ ಶವಾಗಾರದ ಸುತ್ತಲೂ ಗೋಡೆ ಕಟ್ಟಲು ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಲಾಹೋರ್‌ನಲ್ಲಿ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರವು (ಸಿಡಿಎ) ಸೋಮವಾರ ಅಧಿಸೂಚನೆ ಹೊರಡಿಸಿದೆ.

ಈ ಹಿಂದೆ ಕೆಲವರು ಪಾಕಿಸ್ತಾನ ಸರ್ಕಾರಕ್ಕೆ ಹಿಂದೂ ದೇವಸ್ಥಾನ ನಿರ್ಮಿಸಲು ಅನುಮತಿ ನೀಡಬಾರದೆಂದು ಎಚ್ಚರಿಕೆ ನೀಡಿದ್ದರು.

ಧಾರ್ಮಿಕ ವ್ಯವಹಾರಗಳ ಸಚಿವ ಪಿರ್ ನೂರ್ಲ್ ಹಕ್ ಖಾದ್ರಿ ಅವರು ಈ ವಿಚಾರವನ್ನು ಇಸ್ಲಾಮಿಕ್‌ ತತ್ವಗಳ ಸಮಿತಿಗೆ ಒಪ್ಪಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸಮಿತಿಯು, ದೇವಾಲಯ ನಿರ್ಮಾಣಕ್ಕೆ ಅಡ್ಡಿ ಇಲ್ಲ ಎಂದು ಹೇಳಿದೆ.

TRENDING