Monday, January 25, 2021
Home ಅಂತರ್ ರಾಜ್ಯ ಗುಜರಾತ್‌ ನ ಸೋಮನಾಥ ದೇಗುಲದ 1400ಕ್ಕೂ ಹೆಚ್ಚು ಕಳಶಗಳಿಗೆ ಚಿನ್ನದ ಲೇಪನ

ಇದೀಗ ಬಂದ ಸುದ್ದಿ

ಗುಜರಾತ್‌ ನ ಸೋಮನಾಥ ದೇಗುಲದ 1400ಕ್ಕೂ ಹೆಚ್ಚು ಕಳಶಗಳಿಗೆ ಚಿನ್ನದ ಲೇಪನ

 ಗುಜರಾತ್‌ನಲ್ಲಿರುವ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನದ ಕಳಶಗಳಿಗೆ ಚಿನ್ನ ಲೇಪಿತ ಕವಚಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಕೆಲಸವು 2021ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

“ಸೋಮನಾಥ ದೇವಸ್ಥಾನದ 1400ಕ್ಕೂ ಹೆಚ್ಚು ಕಳಶಗಳಿಗೆ ಚಿನ್ನ ಲೇಪನದ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಇದುವರೆಗೂ ಸುಮಾರು 500ಕ್ಕೂ ಹೆಚ್ಚು ಮಂದಿ ಈ ಅಭಿಯಾನಕ್ಕೆ ಧನ ಸಹಾಯ ಮಾಡಿದ್ದಾರೆ” ಎಂದು ಸೋಮನಾಥ ದೇವಸ್ಥಾನದ ಟ್ರಸ್ಟಿ ಪಿ.ಕೆ. ಲಹೇರಿ ತಿಳಿಸಿದ್ದಾರೆ.

“ಚಿನ್ನ ಲೇಪಿತ ಕಳಶಗಳು ರಾತ್ರಿಯಿಡೀ ಕಾಣುವಂತೆ ಮಾಡಲು ನಾವು ಬೆಳಕಿನ ವ್ಯವಸ್ಥೆಯನ್ನೂ ಸಹ ಮಾಡಿದ್ದೇವೆ. ಕೋವಿಡ್-19 ಕಾರಣದಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಸಾಮಾನ್ಯವಾಗಿ ದಿನಂಪ್ರತಿ ದೇಶ-ವಿದೇಶಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ಕೊಡುತ್ತಾರೆ” ಎಂದು ಲಹೆರಿ ತಿಳಿಸಿದ್ದಾರೆ.

ಜ್ಯೋತಿರ್ಲಿಂಗಗಳ ಪೈಕಿ ಮೊದಲನೇಯದು ಎಂಬ ಹೆಗ್ಗಳಿಕೆ ಸೋಮನಾಥ ದೇಗುಲದ್ದಾಗಿದೆ.

TRENDING