ಗಾಂಧಿನಗರ(ಗುಜರಾತ್),ಡಿ.22- ಅನಿಲ ಸೋರಿಕೆಯಿಂದ ಗ್ಯಾಸ್ ಪೈಪ್ಲೈನ್ ಸ್ಫೋಟಗೊಂಡು ಇಬ್ಬರು ಮೃತಪಟ್ಟು, ಎರಡು ಮನೆಗಳು ಕುಸಿದುಬಿದ್ದಿರುವ ಘಟನೆ ಗಾಂಧಿನಗರದ ಕಲೋಲ್ನಗರದಲ್ಲಿ ಇಂದು ನಡೆದಿದೆ. ಕಲೋಲ್ ಕ್ಷೇತ್ರದ ಸಮೀಪವಿರುವ ವಸತಿ ಪ್ರದೇಶದಲ್ಲಿನ ಗ್ಯಾಸ್ ಪೈಪ್ಲೈನ್ನಲ್ಲಿ ಇಂದು ಬೆಳಗ್ಗೆ 9.30ರಲ್ಲಿ ಅನಿಲ ಸೋರಿಕೆಯಾಗಿ ಪೈಪ್ಲೈನ್ಗಳು ಸ್ಫೋಟಗೊಂಡಿವೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಸ್ಫೋಟದ ಶಬ್ದಕ್ಕೆ ಎರಡು ಮನೆಗಳು ಕುಸಿದುಹೋಗಿವೆ.
ಸ್ಥಳದಲ್ಲಿ ಅಗ್ನಿಶಾಮಕ ದಳದವರು ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಕ್ರೈಸಿಸ್ ಮ್ಯಾನೇಜ್ಮೆಂಟ್ ತಂಡಕ್ಕೆ ಯಾವುದೇ ರೀತಿಯ ಅನಿವಾರ್ಯತೆ ಎದುರಾದರೆ ಸಜ್ಜಾಗಿರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ಯಾಸ್ ಪೈಪ್ಲೈನ್ಗಳು ಒಎನ್ಜಿಸಿ ಕಂಪನಿಯದ್ದಾಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಪೈಪ್ಲೈನ್ ಒಎನ್ಜಿಸಿಗೆ ಸೇರಿಲ್ಲ ಎಂದು ಕಂಪನಿಯು ಸ್ಪಷ್ಟಪಡಿಸಿದೆ.