Tuesday, January 26, 2021
Home ಅಂತರ್ ರಾಷ್ಟ್ರೀಯ ಬಲೂಚ್ ಕಾರ್ಯಕರ್ತೆ ಕರೀಮಾ ಬಲೂಚ್ ಕೆನಡಾದಲ್ಲಿ ನಿಗೂಢ ಸಾವು

ಇದೀಗ ಬಂದ ಸುದ್ದಿ

ಬಲೂಚ್ ಕಾರ್ಯಕರ್ತೆ ಕರೀಮಾ ಬಲೂಚ್ ಕೆನಡಾದಲ್ಲಿ ನಿಗೂಢ ಸಾವು

ಕೆನಡಾ : ಪಾಕಿಸ್ತಾನವನ್ನು ತ್ಯಜಿಸಿ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಹೋರಾಟಗಾರ್ತಿ ಕರೀಮಾ ಬಲೂಚ್ ಕೆನಡಾದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

2016 ರಲ್ಲಿ ಇವರು ಪಾಕಿಸ್ತಾನವನ್ನು ತೊರೆದು ಕೆನಡಾದಲ್ಲಿ ಆಶ್ರಯ ಪಡೆದಿದ್ದರು. ಕೆನಡಾದ ಹಾರ್ಬರ್ ಫ್ರಂಟ್ ನಲ್ಲಿ ಆಕೆ ಮೃತಪಟ್ಟಿರುವುದು ವರದಿಯಾಗಿದೆ.

ಸ್ಥಳೀಯ ಮಾಹಿತಿಯ ಪ್ರಕಾರ, ಟೊರೋಂಟೋ ಲೇಕ್ ಶೋರ್ ನ ಬಳಿಯಲ್ಲಿರುವ ದ್ವೀಪದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ದೇಹ ಪೊಲೀಸರ ವಶದಲ್ಲಿಯೇ ಇದ್ದು, ಮಹಿಳೆ ಕರೀಮಾ ಬಲೂಚ್ ಅವರ ಪತಿ ಹಮ್ಮಾಲ್ ಹೈದರ್ ಹಾಗೂ ಸಹೋದರ ಮೃತದೇಹವನ್ನು ಗುರುತಿಸಿದ್ದಾರೆ. ತನಿಖೆ ನಡೆದಿದೆ.

TRENDING