Wednesday, January 27, 2021
Home ಸುದ್ದಿ ಜಾಲ ಕ್ಲಬ್‌ ಮೇಲೆ ದಾಳಿ :ಕ್ರಿಕೆಟಿಗ ಸುರೇಶ್ ರೈನಾ ಬಂಧನ

ಇದೀಗ ಬಂದ ಸುದ್ದಿ

ಕ್ಲಬ್‌ ಮೇಲೆ ದಾಳಿ :ಕ್ರಿಕೆಟಿಗ ಸುರೇಶ್ ರೈನಾ ಬಂಧನ

ಮುಂಬೈ: ಮುಂಬೈ ವಿಮಾನ ನಿಲ್ದಾಣದ ಸಮೀಪವಿರುವ ಮುಂಬೈ ಕ್ಲಬ್‌ನ ಮೇಲೆ ದಾಳಿ ನಡೆಸಿರುವ ಮುಂಬೈ ಪೊಲೀಸರು ಮಾಜಿ ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಸಹಿತ 34 ಜನರನ್ನು ಬಂಧಿಸಿದ್ದಾರೆ. ಕ್ರಿಕೆಟಿಗ ರೈನಾರನ್ನು ಆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಕ್ಲಬ್‌ನ್ನು ಅನುಮತಿ ನೀಡಿದ ಸಮಯಕ್ಕಿಂತ ಹೆಚ್ಚು ಕಾಲ ತೆರೆದಿರುವುದಕ್ಕೆ ಹಾಗೂ ಕೋವಿಡ್ ಮಾನದಂಡಗಳನ್ನು ಪಾಲಿಸದೇ ಇರುವುದಕ್ಕೆ ಈ ಬಂಧನ ನಡೆದಿದೆ. ಬಂಧಿತರಲ್ಲಿ ಗಾಯಕ ಗುರು ರಾಂಧವ ಅವರಿದ್ದಾರೆ. ಏಳು ಮಂದಿ ಹೊಟೇಲ್ ಸಿಬ್ಬಂದಿ ಸಹಿತ ಒಟ್ಟು 34 ಜನರನ್ನು ಬಂಧಿಸಲಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

ರೈನಾ ಜನವರಿ 10ರಂದು ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20ಟ್ರೋಫಿಯಲ್ಲಿ ತವರು ರಾಜ್ಯ ಉತ್ತರಪ್ರದೇಶವನ್ನು ಪ್ರತಿನಿಧಿಸಲಿದ್ದಾರೆ. ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆಯ ಶಿಬಿರದಲ್ಲಿ ರೈನಾ ಭಾಗವಹಿಸಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ ರೈನಾ ಅವರು ದೇಶೀಯ ಕ್ರಿಕೆಟ್‌ನಲ್ಲಿ ಮುಂದುವರಿಯಲು ನಿರ್ಧರಿಸಿದ್ದರು. ಕಮಲಾ ಕ್ಲಬ್‌ನಲ್ಲಿ ಉತ್ತರಪ್ರದೇಶ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದರು.

TRENDING