Wednesday, January 20, 2021
Home ಸುದ್ದಿ ಜಾಲ ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ಐವರು ಸಾವು

ಇದೀಗ ಬಂದ ಸುದ್ದಿ

ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ಐವರು ಸಾವು

 ಸಿಯೋನಿ : ಮಧ್ಯಪ್ರದೇಶದ ಬುಂಡೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಲೋನಿಯಾ ಎಂಬ ಟೋಲ್ ಪ್ಲಾಜಾದಲ್ಲಿ ನಿಂತಿದ್ದ ತೈಲ ಟ್ಯಾಂಕರ್​​​​ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ಮೃತಪಟ್ಟ ಐವರಲ್ಲಿ ನಾಲ್ವರನ್ನು ವಿಜಯ್ ಬಹದ್ದೂರ್ ಪಟೇಲ್, ಅವರ ಪತ್ನಿ ಸರಿತಾ, ಅವರ ಮಗ ಅಜಯ್ ಕುಮಾರ್ ಮತ್ತು ರಾಧಾ ಎಂದು ಗುರುತಿಸಲಾಗಿದೆ. ಮೃತಪಟ್ಟ ಮತ್ತೊಬ್ಬ ಮಹಿಳೆ ಗುರುತು ಪತ್ತೆಯಾಗಿಲ್ಲ.

ಅಪಘಾತದಲ್ಲಿ ಗಾಯಗೊಂಡ ಮೃತ ವಿಜಯ್ ಬಹದ್ದೂರ್ ಪಟೇಲ್ ಅವರ ಪುತ್ರಿ ಚಂದನಾ (20) ಸೇರಿದಂತೆ ಶ್ರೇಯಾ (9) ಮತ್ತು ಪ್ರಖರ್ (4) ಎಂಬ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೃತರು ಉತ್ತರ ಪ್ರದೇಶದ ವಾರಣಾಸಿ ಮೂಲದವರಾಗಿದ್ದು, ಬೆಂಗಳೂರಿಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಅತಿಯಾದ ವೇಗದಿಂದ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

TRENDING