Sunday, January 24, 2021
Home ಅಂತರ್ ರಾಜ್ಯ ಮಹಾರಾಷ್ಟ್ರದಲ್ಲಿ 12 ಶತಮಾನದ ಮೂರು ಶಿಲಾಶಾಸನಗಳು ಪತ್ತೆ

ಇದೀಗ ಬಂದ ಸುದ್ದಿ

ಮಹಾರಾಷ್ಟ್ರದಲ್ಲಿ 12 ಶತಮಾನದ ಮೂರು ಶಿಲಾಶಾಸನಗಳು ಪತ್ತೆ

 ಪಾಲ್ಗಾರ್,ಡಿ.21-ಮಹಾರಾಷ್ಟ್ರದಲ್ಲಿ 12ನೆ ಶತಮಾನಕ್ಕೆ ಸೇರಿದ ಮೂರು ಶಿಲಾಶಾಸನಗಳು ಪತ್ತೆಯಾಗಿವೆ. ಪಾಲ್ಗಾರ್ ಜಿಲ್ಲೆಯ ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಜಾಮ್ಸರ್ ಪ್ರದೇಶದಲ್ಲಿ ಮೂರು ಶಿಲಾ ಶಾಸನಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಸ್ಥಳೀಯರು ಕೆರೆ ಹೂಳು ತೆಗೆಯುತ್ತಿದ್ದಾಗ ಭೂಗರ್ಭದಲ್ಲಿ ಶಿಲಾ ಶಾಸನಗಳು ಪತ್ತೆಯಾಗಿವೆ ಎಂದು ತಹಸೀಲ್ದಾರ್ ಸಂತೋಷ್ ಶಿಂಧೆ ತಿಳಿಸಿದ್ದಾರೆ.

ವರ್ಲಿ ಚಿತ್ರಕಲೆಗಳಿಗೆ ಹೆಸರುವಾಸಿಯಾಗಿರುವ ಈ ಪ್ರದೇಶವನ್ನು 1343ರಲ್ಲಿ ರಾಜ ಜಯಾಬಾ ಮುಖ್ನೆ ಎಂಬಾತ ಆಳುತ್ತಿದ್ದ ನಂತರ ಆ ನಗರ ನಶಿಸಿ ಹೋಗಿತ್ತು. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿರಲಿಲ್ಲ. ಈಗ ಲಭ್ಯವಾಗಿರುವ ಶಿಲಾ ಶಾಸನಗಳು ಆತನ ಕಾಲಕ್ಕೆ ಸೇರಿದ್ದಿರಬೇಕು ಎಂದು ಶಂಕಿಸಲಾಗಿದೆ.

TRENDING