Tuesday, January 26, 2021
Home ಜಿಲ್ಲೆ ಮೈಸೂರು ಗ್ರಾ.ಪಂಚಾಯಿತಿ ಚುನಾವಣೆ : ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ

ಇದೀಗ ಬಂದ ಸುದ್ದಿ

ಗ್ರಾ.ಪಂಚಾಯಿತಿ ಚುನಾವಣೆ : ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ

ಮೈಸೂರು: ಗ್ರಾಮ ಪಂಚಾಯತಿ ಚುನಾವಣಾ ಕಣ ರಂಗೇರಿದ್ದು, ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು  ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ‌ ತೆರೆ ಬಿದ್ದಿದ್ದು ಇಂದು ಮನೆ ಮನೆ ಭೇಟಿಗೆ ಮಾತ್ರ ಅವಕಾಶವಿದೆ.

ನಾಳೆ‌ ಮೊದಲ‌ ಹಂತದ ಮತದಾನ ಪ್ರಕ್ರಿಯೆಗೆ ಮೈಸೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯ 5 ತಾಲ್ಲೂಕಿನ 148 ಪಂಚಾಯತಿಗಳಿಗೆ ‌ ಮತದಾನ ನಡೆಯಲಿದ್ದು, ಮೊದಲ ಹಂತದಲ್ಲಿ‌  6475 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಹುಣಸೂರು, ಕೆ.ಆರ್‌.ನಗರ, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಹಾಗೂ ಸರಗೂರು ತಾಲೂಕಿನಲ್ಲಿ ಚುನಾವಣೆ ನಡೆಯಲಿದ್ದು,  ನಾನ ತಂತ್ರಗಳ ಮೂಲಕ ಮತದಾರರನ್ನ ಸೆಳೆಯಲು ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.

ಇನ್ನು ಇಂದು ಐದು ತಾಲೂಕಿನಲ್ಲಿ ಆಯಾ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ. ನಾಳೆ ಮಂಗಳವಾರ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಲಿದ್ದು, ಇಂದು ಸಂಜೆಯೇ ಬೂತ್ ಅಧಿಕಾರಿಗಳು ಮತಗಟ್ಟೆಗಳತ್ತ ತೆರಳಲಿದ್ದಾರೆ. ಡಿಸೆಂಬರ್ 30ಕ್ಕೆ  ಆಯಾ ತಾಲೂಕಿನ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

TRENDING