Tuesday, January 26, 2021
Home ಜಿಲ್ಲೆ ಮೈಸೂರು ಯಾರಾಗ್ತಾರೆ ಮೈಸೂರು ಡಿಸಿ..? : ರೋಹಿಣಿ ಸಿಂಧೂರಿ ಅಥವಾ ಶರತ್, ಸಂಜೆಯವರಗೆ ಡೆಡ್ ಲೈನ್..!

ಇದೀಗ ಬಂದ ಸುದ್ದಿ

ಯಾರಾಗ್ತಾರೆ ಮೈಸೂರು ಡಿಸಿ..? : ರೋಹಿಣಿ ಸಿಂಧೂರಿ ಅಥವಾ ಶರತ್, ಸಂಜೆಯವರಗೆ ಡೆಡ್ ಲೈನ್..!

ಮೈಸೂರು: ಮೈಸೂರಿನ ವರ್ಗಾಯಿತ ಜಿಲ್ಲಾಧಿಕಾರಿ ಬಿ. ಶರತ್ ಮರು ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಇಂದು ಸಂಜೆಯೊಳಗೆ ಆದೇಶ ಹೊರಡಿಸಬೇಕಿದೆ.

ಅವಧಿ ಮುನ್ನ ವರ್ಗಾವಣೆಯನ್ನು ಪ್ರಶ್ನಿಸಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್ ಸಿಎಟಿ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ಸುದೀರ್ಘವಾಗಿ ನಡೆದು ಕಳೆದ ವಿಚಾರಣಾ ವೇಳೆ ರಾಜ್ಯಸರ್ಕಾರಕ್ಕೆ ಶರತ್ ಅವರನ್ನ ಡಿಸೆಂಬರ್ 22ರೊಳಗಾಗಿ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಮರುನೇಮಕಗೊಳಿಸಲು ಸಿಎಟಿ ಸೂಚಿಸಿತ್ತು.

ಒಂದು ವೇಳೆ ಈ ಆದೇಶ ಪಾಲಿಸಲು ವಿಫಲವಾದಲ್ಲಿ ಸಿಎಟಿಯೇ ಶರತ್ ಅವರನ್ನ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಮರುನೇಮಕಗೊಳಿಸಬೇಕಾಗುತ್ತದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಸಿಎಟಿ ಆದೇಶ ಪಾಲಿಸಿ ಇಂದು ಸಂಜೆಯೊಳಗೆ ಬಿ. ಶರತ್ ಮರುನೇಮಕದ ಆದೇಶ ಹೊರಡಿಸಬೇಕಿದೆ.

TRENDING