Wednesday, January 27, 2021
Home ಸುದ್ದಿ ಜಾಲ ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಯುವತಿಯ ಕೊಲೆಗೆ ಯತ್ನಿಸಿದ ಪಾಗಲ್ ಪ್ರೇಮಿ.!

ಇದೀಗ ಬಂದ ಸುದ್ದಿ

ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಯುವತಿಯ ಕೊಲೆಗೆ ಯತ್ನಿಸಿದ ಪಾಗಲ್ ಪ್ರೇಮಿ.!

 ಹುಬ್ಬಳ್ಳಿ: ಯುವಕನೊಬ್ಬ ಮಚ್ಚಿನಿಂದ ಕೊಚ್ಚಿ ಯುವತಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.

ಆರೋಪಿ ಇಮ್ತಿಯಾಜ್ ಬೆಳ್ಳಂಬೆಳಗ್ಗೆಯೇ ಯುವತಿಯನ್ನು ಕೊಲೆ ಮಾಡಲು ಯತ್ನಿಸಿದ್ದು, ಮಾಸ್ಕ್ ಹಾಕಿಕೊಂಡು ಬಂದು ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಯವತಿಯ ಕತ್ತಿಗೆ ಮೂರು ಬಾರಿ ಮಚ್ಚಿನಿಂದ ಕೊಚ್ಚಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲ್ಲೆಗೈದ ಯುವಕನ್ನು ಬಂಧಿಸಿದ್ದಾರೆ. ಬಂಧಿತ ಇಮ್ತಿಯಾಜ್ ಆಟೋ ಚಾಲಕನಾಗಿದ್ದು, ಕುಂದಗೋಳ ತಾಲೂಕಿನ ಕುಂಕುರ ಗ್ರಾಮದ ನಿವಾಸಿ ಎಂಬ ಮಾಹಿತಿ ಲಭಿಸಿದೆ.
ಕಳೆದ ಎರಡು ವರ್ಷದಿಂದ ಪರಸ್ಪರ ಇಬ್ಬರು ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ಹಲ್ಲೆಗೊಳಗಾದ ಯುವತಿಯನ್ನು ದೇಶಪಾಂಡೆ ನಗರದ ನಿವಾಸಿ ಶೈನಾಭಾನು ಎಂದು ಗುರುತಿಸಲಾಗಿದೆ. ಈಕೆ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.

TRENDING