ಬೆಂಗಳೂರು : ಮೊನ್ನೆ ಕೊಡವರು ಬೀಫ್ ತಿನ್ನುತ್ತಾರೆ ಎಂಬ ಅಪ್ಪಟ ಸುಳ್ಳನ್ನು ಹೇಳಿ ವಿಷಾದ ವ್ಯಕ್ತಪಡಿಸಿದ್ದ ರಾಜ್ಯದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸತ್ಯ ಹೇಳುವ ಬುದ್ಧಿ ಬರಲಿ ಎಂದು ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿರುವ ಅವರು, ಮೊನ್ನೆ ಕೊಡವರು ಬೀಫ್ ತಿನ್ನುತ್ತಾರೆ ಎಂಬ ಅಪ್ಪಟ ಸುಳ್ಳನ್ನು ಹೇಳಿ ನಂತರ ವಿಷಾದ ವ್ಯಕ್ತ ಪಡಿಸಿದ್ದ ಸಿದ್ದರಾಮಯ್ಯ ಅವರು ಇಂದು ನಾನು ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಶಾಮೀಲಾಗಿದ್ದೇನೆ ಎಂಬ ಮತ್ತೊಂದು ಅಪ್ಪಟ ಅಸತ್ಯವನ್ನು ಹೇಳಿದ್ದಾರೆ. ಅವರಿಗೆ ಸತ್ಯ ಹೇಳುವ ಬುದ್ಧಿ ಬರಲಿ ಎಂದು ಹೇಳಿದ್ದಾರೆ.