Wednesday, January 20, 2021
Home ಸುದ್ದಿ ಜಾಲ ಡ್ರಗ್ ಪ್ರಕರಣ : ಎನ್ ಸಿಬಿ ಕಚೇರಿಗೆ ಹಾಜರಾದ ನಟ ಅರ್ಜುನ್ ರಾಂಪಾಲ್

ಇದೀಗ ಬಂದ ಸುದ್ದಿ

ಡ್ರಗ್ ಪ್ರಕರಣ : ಎನ್ ಸಿಬಿ ಕಚೇರಿಗೆ ಹಾಜರಾದ ನಟ ಅರ್ಜುನ್ ರಾಂಪಾಲ್

ಮುಂಬೈ : ಬಾಲಿವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ರಾಂಪಾಲ್ ಸೋಮವಾರ (ಡಿಸೆಂಬರ್ 21) ಮುಂಬೈನ ನಾರ್ಕೋಟಿಕ್ಸ್ ಕಾನ್ರೊಲ್ ಬ್ಯೂರೋ (ಎನ್ ಸಿಬಿ) ಕಚೇರಿಗೆ ಆಗಮಿಸಿದರು.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಏಜೆನ್ಸಿ ನಡೆಸುತ್ತಿರುವ ಡ್ರಗ್ ತನಿಖೆಯಲ್ಲಿ ನಟನನ್ನು ಪ್ರಶ್ನಿಸಲಾಗುತ್ತಿದೆ. ಅರ್ಜುನ್ ರಾಂಪಾಲ್ ಅವರು ಬೆಳಗ್ಗೆ 11.30ಕ್ಕೆ ಮುಂಬೈ ಎನ್ ಸಿಬಿ ಕಚೇರಿಗೆ ಆಗಮಿಸಿದರು.

‘ನಟ ಅರ್ಜುನ್ ರಾಂಪಾಲ್ ಅವರು ಮಹಾರಾಷ್ಟ್ರದ ಮುಂಬೈನಲ್ಲಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಕಚೇರಿಗೆ ತಲುಪಿದ್ದಾರೆ. ಮಾದಕ ವಸ್ತು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಏಜೆನ್ಸಿಯಿಂದ ಸಮನ್ಸ್ ಜಾರಿ ಮಾಡಲಾಗಿದೆ’ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಡಿಸೆಂಬರ್ 15ರಂದು, ಏಜೆನ್ಸಿಯು ನಡೆಸುತ್ತಿರುವ ಬಾಲಿವುಡ್ ಡ್ರಗ್ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಎನ್ ಸಿಬಿ ಅರ್ಜುನ್ ರಾಂಪಾಲ್ ಅವರಿಗೆ ಸಮನ್ಸ್ ನೀಡಿತ್ತು. ಡಿಸೆಂಬರ್ 16ರಂದು ಎನ್ ಸಿಬಿ ಕಚೇರಿಗೆ ಬರುವಂತೆ ನಟನಿಗೆ ಕೇಳಲಾಗಿತ್ತು. ಆದರೆ, ಅರ್ಜುನ್ ರಾಂಪಾಲ್ ಅವರು ಡಿಸೆಂಬರ್ 22ರ ವರೆಗೆ ಕಾಲಾವಕಾಶ ಕೇಳಿದ್ದರು.

TRENDING