Sunday, January 24, 2021
Home ಅಂತರ್ ರಾಜ್ಯ ಜಮ್ಮು,ಕಾಶ್ಮೀರದಲ್ಲಿ 3.7 ತೀವ್ರತೆಯ ಭೂಕಂಪನ

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರದಲ್ಲಿ 3.7 ತೀವ್ರತೆಯ ಭೂಕಂಪನ

ಶ್ರೀನಗರ, ಡಿ. 21: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪ ಸಂಭವಿಸಿರುವುದಾಗಿ ತಿಳಿದುಬಂದಿದೆ. ರಿಕ್ಟರ್ ಮಾಪನದಲ್ಲಿ 3.7 ತೀವ್ರತೆಯಷ್ಟು ಭೂಕಂಪ ಸಂಭವಿಸಿದೆ ಎನ್ನಲಾಗಿದೆ.

ಸೋಮವಾರ ಬೆಳಿಗ್ಗೆ ಸುಮಾರು 8.33ರ ಸಮಯದಲ್ಲಿ ಭೂಕಂಪನವಾಗಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಭೂಕಂಪಿಸಿದ ಅನುಭವದಿಂದಾಗಿ ಜನರು ಮನೆಗಳಿಂದ, ವಾಣಿಜ್ಯ ಮಳಿಗೆಗಳಿಂದ ಹೊರಗೋಡಿದ್ದಾರೆ. ಭೂಕಂಪದಿಂದ ಯಾವುದೇ ಆಸ್ತಿಪಾಸ್ತಿ, ಜೀವಹಾನಿ ಸಂಭವಿಸಿರುವ ವರದಿಯಾಗಿಲ್ಲ.

ಕಳೆದ ಗುರುವಾರವಷ್ಟೇ ರಾಜಸ್ಥಾನದ ಅಲ್ವಾರ್ ನಲ್ಲಿ 4.2 ತೀವ್ರತೆಯ ಭೂಕಂಪಸ ಸಂಭವಿಸಿದ್ದು, ದೆಹಲಿಯಲ್ಲಿಯೂ ಇದರ ಪರಿಣಾಮ ಉಂಟಾಗಿತ್ತು. ದೆಹಲಿ, ನೋಯ್ಡಾ, ಗುರುಗ್ರಾಮ, ಫಾಜಿಯಾಬಾದ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭೂಮಿ ಕಂಪಿಸಿದ್ದಾಗಿ ತಿಳಿದುಬಂದಿತ್ತು.

ಡಿ. 20ರ ಭಾನುವಾರ ರಾತ್ರಿ ಟೋಕಿಯೋ, ಜಪಾನ್ ನಲ್ಲಿಯೂ 6.3 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಕೇಂದ್ರವು ಮಾಹಿತಿ ನೀಡಿದೆ. ಯಾವುದೂ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ.

.

TRENDING