Saturday, January 16, 2021
Home ಜಿಲ್ಲೆ ಗದಗ ಗ್ರಾ. ಪಂ. ಚುನಾವಣೆ ಹಿನ್ನೆಲೆ : ಕಾರಿನಲ್ಲಿ ಅಕ್ರಮ ಮಧ್ಯ ಮಾರಾಟ, ಇಬ್ಬರ ಬಂಧನ

ಇದೀಗ ಬಂದ ಸುದ್ದಿ

ಗ್ರಾ. ಪಂ. ಚುನಾವಣೆ ಹಿನ್ನೆಲೆ : ಕಾರಿನಲ್ಲಿ ಅಕ್ರಮ ಮಧ್ಯ ಮಾರಾಟ, ಇಬ್ಬರ ಬಂಧನ

ಗದಗ : ಗ್ರಾಮ ಪಂಚಾಯತಿ  ಚುನಾವಣೆ ಹಿನ್ನೆಲೆಯಲ್ಲಿ ಕಾರಿನಲ್ಲಿ ಅಕ್ರಮ ಮಧ್ಯ ಸಾಗಿಸುತ್ತಿದ್ದ ಇಬ್ಬರ ವ್ಯಕ್ತಿಗಳನ್ನ ಬಂಧಿಸಿದ ಘಟನೆ ಗದಗನಲ್ಲಿ ನಡೆದಿದೆ.‌ ಗದಗ ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ಘಟನೆ ನಡೆದಿದೆ.

ಅಕ್ರಮ ಮದ್ಯ ಸಾಗಾಟ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಗದಗ ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಂಕದಕಟ್ಟಿ “ಜೂ” ಕ್ರಾಸ್ ಹತ್ತಿರದಲ್ಲಿ ರಸ್ತೆಗಾವಲು ನಿರ್ವಹಿಸುತ್ತಿರುವ ಸಮಯದಲ್ಲಿ KA-26 M-6948 ನೊಂದಣಿಯ HUNDAI I20 SPOTZ ಕಾರ್ ನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ.

ಇನ್ನು, ರೂ.15216.00 ಮೌಲ್ಯದ 34.560 ಲೀಟರ್ ಮದ್ಯವನ್ನು ಹಾಗೂ ರೂ 550000.00 ಮೌಲ್ಯದ ಕಾರನ್ನು ಜಪ್ತಿ ಮಾಡಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 11, 14 ಮತ್ತು 15 ಉಲ್ಲಂಘನೆಯಾಗಿದ್ದು, ಸದರಿ ಕಾಯ್ದೆಯ ಕಲಂ 32(1)  38(ಎ) ಮತ್ತು 43 ರನ್ವಯ ಶಿಕ್ಷಾರ್ಹ ಅಪರಾಧವಾಗಿದೆ.

‌ಈ ಕುರಿತು ಅಸುಂಡಿ ಗ್ರಾಮದ ಮಂಜುನಾಥ ವೆಂಕಪ್ಪ ಪೂಜಾರ ಮತ್ತು ಅಸುಂಡಿ ಗ್ರಾಮದ ಈರಣ್ಣ ರಾಮಪ್ಪ ಬಡಿಗೇರ (44) ವ್ಯಕ್ತಿಗಳನ್ನ ಬಂಧಿಸಿ ಅವರ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ.

TRENDING