Wednesday, January 27, 2021
Home ಜಿಲ್ಲೆ ಬಾಗಲಕೋಟೆ ರಂಗಭೂಮಿ ನಾಟಕಗಳ ನಿರ್ದೇಶಕ ವೆಂಕಟೇಶ ಕುಲಕರ್ಣಿ ನಿಧನ

ಇದೀಗ ಬಂದ ಸುದ್ದಿ

ರಂಗಭೂಮಿ ನಾಟಕಗಳ ನಿರ್ದೇಶಕ ವೆಂಕಟೇಶ ಕುಲಕರ್ಣಿ ನಿಧನ

  ಬಾದಾಮಿ: ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ನಾಟಕಗಳ ನಿರ್ದೇಶಕ ಹಾಗೂ ಸಂಗೀತಕಾರ ವೆಂಕಟೇಶ ಕುಲಕರ್ಣಿ (82) ಶನಿವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರ, ಇಬ್ಬರು ಪುತ್ರಿ ಇದ್ದಾರೆ.

ಭಾರತೀಯ ಸೇನೆಯಲ್ಲಿ ಕೆಲ ವರ್ಷಗಳವರೆಗೆ ಕಾರ್ಯ ನಿರ್ವಹಿಸಿ ಮರಳಿ ಬಂದ ನಂತರ ನಾಟಕಗಳಲ್ಲಿ ಕೆಲಸ ಮಾಡಿದರು. ನಾಟಕಗಳ ನಿರ್ದೇಶನದ ಜೊತೆಗೆ ಹಾರ್ಮೋನಿಯಂ ನುಡಿಸುವುದು ಹಾಗೂ ಸಂಗೀತ ನಿರ್ದೇಶನ ಕೂಡ ಮಾಡಿದ್ದರು. ಇವರು ನಿರ್ದೇಶಿಸಿದ ರಕ್ತರಾತ್ರಿ, ಗದಾಯುದ್ಧ ಮತ್ತು ಕುರುಕ್ಷೇತ್ರ ನಾಟಕಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳು ಸಂದಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ನಮ್ಮೂರ ಸಾಧಕರು ಮತ್ತು ಚಾಲುಕ್ಯ ಸಿರಿ ಪ್ರಶಸ್ತಿ ಇವರಿಗೆ ಲಭಿಸಿವೆ. ಕಲಾವಿದರ ಶ್ರೇಯೋಭಿವೃದ್ಧಿಗೆ ತಾಲ್ಲೂಕು ಮಟ್ಟದ ಕಲಾವಿದರ ಬಳಗವನ್ನು ಸಂಘಟಿಸಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು.

TRENDING