ತಿರುವನಂತಪುರ : ಕೊರೊನಾ ವೈರಸ್ ಬೆನ್ನಲ್ಲೇ ಕೇರಳಕ್ಕೆ ಮತ್ತೊಂದು ವೈರಸ್ ವಕ್ಕರಿಸಿದ್ದು, ಕೇರಳದ 11 ವರ್ಷದ ಬಾಲಕನಿಗೆ ಶಿಗೆಲ್ಲಾ ಎಂಬ ಸೋಂಕಿನಿಂದ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಬಾಲಕ ಸಾವನ್ನಪ್ಪಿದ 2 ದಿನಗಳ ಬಳಿಕ ಕೋಜಿಕೋಡ್ ಜಿಲ್ಲೆಯ 20 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಶುರುವಾಗಿದೆ. ಈ ವಿಚಾರವಾಗಿ ತನಿಖೆ ಮಾಡಲು ಆರೋಗ್ಯ ಸಚಿವೆ ಶೈಲಜಾ ಸೂಚಿಸಿದ್ದು, ಪ್ರದೇಶದ ಸುತ್ತಮುತ್ತ ಹೆಲ್ತ್ ಕ್ಯಾಂಪ್ ಗಳನ್ನು ಹಾಕಲಾಗಿದೆ. ನೀರು ಅಥವಾ ಆಹಾರದಿಂದ ಈ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶಿಗೆಲ್ಲಾ ಸೋಂಕಿನ ಲಕ್ಷಣಗಳು
- ಅತಿಸಾರ, ಜ್ವರ, ಹೊಟ್ಟೆ ಸೆಳೆತ, ಏಳು ದಿನಗಳ ವರೆಗೆ ಕಾಡುವ ರೋಗಲಕ್ಷಣ. ಸಾಮಾನ್ಯವಾಗಿ ಪ್ರತಿಜೀವಕಗಳ ಮೂಲಕ ಚಿಕಿತ್ಸೆ ಯನ್ನು ಮಾಡಲಾಗುತ್ತದೆ, ಇದು ಕಾಯಿಲೆಯ ಅವಧಿಯನ್ನು ಕಡಿಮೆ ಮಾಡಬಹುದು.
- ಶಿಗೆಲ್ಲಾ ಸೋಂಕು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬವ್ಯಕ್ತಿಗೆ ವಿವಿಧ ಮಾರ್ಗಗಳ ಮೂಲಕ ಹರಡುತ್ತದೆ- ಸೋಂಕಿತ ವ್ಯಕ್ತಿಯು ಅತಿಸಾರದಿಂದ ಗುಣಮುಖಗೊಂಡ ನಂತರವೂ.ಯಾರಿಗಾದರೂ ರೋಗವನ್ನು ಉಂಟುಮಾಡಲು ಸ್ವಲ್ಪ ಸಂಖ್ಯೆಯ ಬ್ಯಾಕ್ಟೀರಿಯಾಗಳು ಬೇಕಾಗುತ್ತದೆ.
- ಕಲುಷಿತ ಆಹಾರ, ನೀರು ಈ ಸೋಂಕಿನ ಮೂಲ.
- ಬ್ಯಾಕ್ಟೀರಿಯಾದ ಇರುವಿಕೆಯನ್ನು ಸಾಮಾನ್ಯವಾಗಿ ಮಲಪರೀಕ್ಷೆಯಿಂದ ದೃಢೀಕರಿಸಲಾಗುತ್ತದೆ.
- ಎಲ್ಲಾ ವಯಸ್ಸಿನ ಜನರು ಸೋಂಕಿಗೆ ಒಳಗಾಗಬಹುದಾದರೂ, ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಕೇರಳದಲ್ಲಿಯೂ ಈ ಸೋಂಕು ತಗುಲಿರುವವರು ಹೆಚ್ಚಾಗಿ ಮಕ್ಕಳೇ. ಪ್ರಯಾಣ ಮಾಡುವ ವರು ಪ್ರಯಾಣಮಾಡುವಾಗ ಕಲುಷಿತ ನೀರು ಬರುವ ಸಾಧ್ಯತೆ ಇರುವುದರಿಂದ ಈ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಸೋಂಕಿತರೊಂದಿಗೆ ಲೈಂಗಿಕ ಸಂಪರ್ಕವು ಸಹ ಈ ರೋಗಕ್ಕೆ ಕಾರಣವಾಗಬಹುದು.