Tuesday, January 19, 2021
Home ದೆಹಲಿ ರಕಾಬ್ ಗಂಜ್ ಗುರುದ್ವಾರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಇದೀಗ ಬಂದ ಸುದ್ದಿ

ರಕಾಬ್ ಗಂಜ್ ಗುರುದ್ವಾರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ದಿಲ್ಲಿಯ ಗುರುದ್ವಾರ ರಾಕಬ್ ಗಂಜ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಶಹೀದ್ ದಿವಸ್ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿದರು. ಆದರೆ ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ಯಾವುದೇ ರೀತಿಯ ಪೂರ್ವಕಾರಣ ಮಾಡಿಕೊಂಡಿರಲಿಲ್ಲ. ಸಾಮಾನ್ಯ ಭಕ್ತರಿಗೂ ಇದೇ ವೇಳೆ ಗುರುದ್ವಾರ ಪ್ರವೇಶಕ್ಕೆ ಅವಕಾಶ ನೀಡಲಾಯಿತು.

ಇಂದು ಬೆಳಿಗ್ಗೆ, ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಪುಣ್ಯ ಶರೀರವನ್ನು ಅಂತ್ಯಸಂಸ್ಕಾರ ಮಾಡಿದ ಐತಿಹಾಸಿಕ ಗುರುದ್ವಾರ ರಕಾಬ್ ಗಂಜ್ ಸಾಹಿಬ್ ನಲ್ಲಿ ಪ್ರಾರ್ಥಿನೆ ಸಲ್ಲಿಸಿದ್ದೇನೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರಂತೆ ನಾನು ಶ್ರೀ ಗುರು ತೇಜ್ ಬಹದ್ದೂರ್ ಅವರ ದಯೆಯಿಂದ ಆಳವಾಗಿ ಸ್ಫೂರ್ತಿ ಪಡೆದಿದ್ದೇನೆ, ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.

ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ 25 ದಿನಕ್ಕೆ ಇಂದು ಕಾಲಿಟ್ಟಿದೆ. ಈ ರೈತರಲ್ಲಿ ಹೆಚ್ಚಿನವರು ಪಂಜಾಬ್ ಮೂಲದ ಸಿಖ್ಖರಾಗಿದ್ದು, ಇದೇ ವೇಳೆ ಮೋದಿ ಗುರುದ್ವಾರ ಭೇಟಿ ಕುತೂಹಲ ಮೂಡಿಸಿದೆ.

TRENDING