Saturday, January 23, 2021
Home ಬೆಂಗಳೂರು `ಚೋಟು' ಹೆಸರಿನ 5 ಕೆ.ಜಿಯ `LPG' ಸಿಲಿಂಡರ್ ಬಿಡುಗಡೆ

ಇದೀಗ ಬಂದ ಸುದ್ದಿ

`ಚೋಟು’ ಹೆಸರಿನ 5 ಕೆ.ಜಿಯ `LPG’ ಸಿಲಿಂಡರ್ ಬಿಡುಗಡೆ

ಬೆಂಗಳೂರು: ಇಂಡಿಯನ್ ಆಯಿಲ್ ಕಂಪನಿಯು ‘ಚೋಟು’ ಹೆಸರಿನ ಐದು ಕೆ.ಜಿ.ಯ ಅಡುಗೆ ಅನಿಲ್ (ಎಲ್‌ಪಿಜಿ) ಸಿಲಿಂಡರ್‌ಅನ್ನು ಬೆಂಗಳೂರಿನಲ್ಲಿ ಈಚೆಗೆ ಬಿಡುಗಡೆ ಮಾಡಿದೆ.

‘ಚೋಟು’ ಎಲ್‌ಪಿಜಿ ಸಿಲಿಂಡರ್‌ ಅನ್ನು ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ಗಳಿಂದ, ಇಂಡೇನ್‌ ಎಲ್‌ಪಿಜಿ ವಿತರಕರಿಂದ ಅಥವಾ ಕೆಲವು ಕಿರಾಣಿ ಅಂಗಡಿ ಗಳಿಂದ ಖರೀದಿಸಬಹುದು. ಒಂದು ಗುರುತಿನ ಚೀಟಿಯನ್ನು ಪುರಾವೆಯ ರೂಪದಲ್ಲಿ ನೀಡಿ, ಈ ಸಿಲಿಂಡರ್ ಪಡೆದುಕೊಳ್ಳಬಹುದು ಎಂದು ಇಂಡಿಯನ್ ಆಯಿಲ್‌ನ ಪ್ರಕಟಣೆ ತಿಳಿಸಿದೆ. ಈ ಸಿಲಿಂಡರ್ ಪಡೆಯಲು ವಿಳಾಸ ದೃಢೀಕರಣದ ಅಗತ್ಯ ಇಲ್ಲ ಎಂದು ಕಂಪನಿ ಹೇಳಿದೆ.

TRENDING