Wednesday, January 20, 2021
Home ದೇಶ ಹೀಗಿರಲಿದೆ ನೋಡಿ ಭಾರತದ ಮೊದಲ ಬುಲೆಟ್ ಟ್ರೇನ್!

ಇದೀಗ ಬಂದ ಸುದ್ದಿ

ಹೀಗಿರಲಿದೆ ನೋಡಿ ಭಾರತದ ಮೊದಲ ಬುಲೆಟ್ ಟ್ರೇನ್!

ನವದೆಹಲಿ : ಮುಂಬೈಅಹ್ಮದಾಬಾದ್ ಮಾರ್ಗದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಜನಾಪ್ ಬುಲೆಟ್ ರೈಲಿನ ಸುಧಾರಿತ ಬೋಗಿಎಂಜಿನ್ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಜಪಾನ್ ರಾಯಭಾರ ಕಚೇರಿ ತಿಳಿಸಿದೆ.

ಜಪಾನ್ ನ ಬುಲೆಟ್ ಟ್ರೈನ್ ಎಂದು ಕರೆಯಲ್ಪಡುವ E5 ಸೀರೀಸ್ ಶಿಂಕನ್ಸನ್ ನ ಮೊದಲ ಅಧಿಕೃತ ಫೋಟೋಗಳನ್ನು ಜಪಾನ್ ರಾಯಭಾರಿ ಕಚೇರಿ ಬಿಡುಗಡೆ ಮಾಡಿದೆ.

ಬುಲೆಟ್ ರೈಲು ಯೋಜನೆ ಎಂದೂ ಕರೆಯಲ್ಪಡುವ MAHSR ಅನ್ನು 2023ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 508 ಕಿ.ಮೀ ಉದ್ದದ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ.

ಈ ಯೋಜನೆ ಪೂರ್ಣಗೊಂಡ ನಂತರ, ಮುಂಬೈ ಮತ್ತು ಅಹಮದಾಬಾದ್ ನಡುವಿನ ಅಂತರವು ಕೇವಲ 2 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಬುಲೆಟ್ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಗಂಟೆಗೆ ಗರಿಷ್ಠ 350 ಕಿ.ಮೀ ವೇಗದಲ್ಲಿ ಓಡಲಿದೆ.

TRENDING