Wednesday, January 20, 2021
Home ಸುದ್ದಿ ಜಾಲ ಕೆಎಸ್‌ಓಯು ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ

ಇದೀಗ ಬಂದ ಸುದ್ದಿ

ಕೆಎಸ್‌ಓಯು ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ

ಹಾವೇರಿ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ(ಕೆ.ಓ.ಎಸ್) ಪೂರಕ ಪರೀಕ್ಷೆ ಇದೇ ಡಿಸೆಂಬರ್ 28 ರಿಂದ ಜನವರಿ 6ರವರೆಗೆ ಹಾವೇರಿ ನಗರದ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ನಡೆಯಲಿವೆ ಎಂದು ಡಯಟ್ ಪ್ರಾಚಾರ್ಯ ಡಿ.ಎಂ.ಬಸವರಾಜಪ್ಪ ಅವರು ತಿಳಿಸಿದ್ದಾರೆ.

ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸ್ಯಾನಿಟೇಸರ್ ಹಾಕಿಕೊಂಡು ನಿಗಧಿತ ಪರೀಕ್ಷಾ ದಿನಾಂಕಗಳನ್ನು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೀಗಿದೆ ಡಿಸೆಂಬರ್ 28ರಿಂದ ಆರಂಭಗೊಳ್ಳಲಿರುವಂತ ಪೂರಕ ಪರೀಕ್ಷೆಯ ವಿವರ..

  • ಡಿಸೆಂಬರ್ 28 ರಂದು ಗಣಿತ
  • ಡಿ. 29 ರಂದು ಕನ್ನಡ
  • ಡಿ.30 ರಂದು ಸಮಾಜ ವಿಜ್ಞಾನ
  • ಡಿ.31 ರಂದು ಇಂಗ್ಲಿಷ್
  • ಜನವರಿ 1 ರಂದು ಹಿಂದಿ
  • ಜ.2 ರಂದು ಅರ್ಥಶಾಸ್ತ್ರ
  • ಜ.4 ರಂದು ವಿಜ್ಞಾನ
  • ಜ.5 ರಂದು ಗೃಹ ವಿಜ್ಞಾನ
  • ಜ.6 ರಂದು ವಾಣಿಜ್ಯ ಅಧ್ಯಯನ

ಈ ಮೇಲ್ಕಂಡ ವಿಷಯಗಳ ಪೂರಕ ಪರೀಕ್ಷೆಯು ಡಿಸೆಂಬರ್ 28ರಿಂದ ಆರಂಭಗೊಂಡು ಜನವರಿ 6ರಂದು ಮುಕ್ತಾಯಗೊಳ್ಳಲಿವೆ. ಅಲ್ಲದೇ ವಿಷಯಗಳ ಪರೀಕ್ಷೆ ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30 ಗಂಟೆವರೆಗೆ ಜರುಗಲಿವೆ.

TRENDING