Tuesday, January 19, 2021
Home ಸುದ್ದಿ ಜಾಲ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮುಖ್ಯ ಮಾಹಿತಿ

ಇದೀಗ ಬಂದ ಸುದ್ದಿ

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮುಖ್ಯ ಮಾಹಿತಿ

 ಹಣಕಾಸಿನ ತುರ್ತು ಪರಿಸ್ಥಿತಿ ಎದುರಾದಾಗ ಕ್ರೆಡಿಟ್​ ಕಾರ್ಡ್​ಗಳು ಆಪತ್ಬಾಂಧವನಂತೆ ಕಾರ್ಯ ನಿರ್ವಹಿಸುತ್ತವೆ. ಆದರೆ ಇಂತಹ ಕ್ರೆಡಿಟ್​ ಕಾರ್ಡ್​ಗಳನ್ನ ಕ್ಲೋಸ್​ ಮಾಡುವಾಗ ಬ್ಯಾಂಕ್​ ಗ್ರಾಹಕರು ತಮ್ಮ ಸಿಬಿಲ್​ ಸ್ಕೋರ್​ಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗುತ್ತೆ.

ಈ ಬಗ್ಗೆ ಸ್ಮಾರ್ಟ್ ಕಾಯಿನ್​ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿತ್​ ಗರ್ಗ್ ಕ್ರೆಡಿಟ್ ಕಾರ್ಡ್ ಕ್ಲೋಸ್​ ಮಾಡುವಾಗ ಫೋರ್ಟ್ ಪೋಲಿಯೋದಲ್ಲಿ ಕ್ರೆಡಿಟ್​ ಮಿಶ್ರಣ ಹೊಂದುವುದನ್ನ ತಡೆಯಬಹುದಾಗಿದೆ. ಇದು ಪ್ರಸ್ತುತ ಸಿಬಿಲ್​ ಸ್ಕೋರ್​ ಕಡಿಮೆಯಾಗದಂತೆ ನೋಡಿಕೊಳ್ಳುತ್ತೆ. ಆದರೆ ಕ್ರೆಡಿಟ್​ ಸ್ಕೋರ್​ ಸುಧಾರಣೆ ಮಾಡುವಲ್ಲಿ ಸಹಾಯಕವಾಗಲ್ಲ ಎಂದು ಹೇಳಿದ್ದಾರೆ.

ಗ್ರಾಹಕರು ಬ್ಯಾಂಕ್​ ನೀಡಿದ ಕ್ರೆಡಿಟ್​ ಕಾರ್ಡ್ ಖಾತೆಯನ್ನ ಮುಚ್ಚಿದಾಗ ಕ್ರೆಡಿಟ್​ ಮಿತಿಯನ್ನೂ ಕಳೆದುಕೊಳ್ತಾರೆ. ಇದು ಸಾಲಗಾರರಿಗೆ ಅಪಾಯದ ಸಂಕೇತವಾಗಿದೆ. ಏಕೆಂದರೆ ಗ್ರಾಹಕರು ಹೆಚ್ಚಿನ ಪ್ರಮಾಣದ ಸಾಲವನ್ನ ಬಳಕೆ ಮಾಡ್ತಿದ್ದಾರೆ ಎಂಬುದನ್ನ ತೋರಿಸುತ್ತೆ ಎಂದು ಹೇಳಿದ್ದಾರೆ.

TRENDING