Wednesday, January 20, 2021
Home ಅಂತರ್ ರಾಷ್ಟ್ರೀಯ ಚೀನಾದಲ್ಲಿ ಶಿರಚ್ಚೇದವಾದ ಬುದ್ಧನ ದೈತ್ಯ ಪ್ರತಿಮೆ ಪತ್ತೆ

ಇದೀಗ ಬಂದ ಸುದ್ದಿ

ಚೀನಾದಲ್ಲಿ ಶಿರಚ್ಚೇದವಾದ ಬುದ್ಧನ ದೈತ್ಯ ಪ್ರತಿಮೆ ಪತ್ತೆ

ನೈಋತ್ಯ ಚೀನಾದಲ್ಲಿ ಬುದ್ಧನ ದೈತ್ಯ ಪ್ರತಿಮೆಯೊಂದು ಪತ್ತೆಯಾಗಿದ್ದು ಅದರ ತಲೆ ಭಾಗ ಕಾಣೆಯಾಗಿದೆ.

ಸುಮಾರು 30 ಅಡಿ ಎತ್ತರದ ಈ ಬುದ್ಧನ ಪ್ರತಿಮೆ ಕ್ವಿಂಗ್​ ರಾಜವಂಶಕ್ಕಿಂತಲೂ ಹಿಂದಿನದು ಎಂದು ನಂಬಲಾಗಿದೆ. ಆದರೆ ಇದನ್ನ ಯಾರ ಕಾಲದಲ್ಲಿ ಯಾವಾಗ ನಿರ್ಮಿಸಲಾಯ್ತು ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಚಾಂಗ್​ಕಿಂಗ್​ನ ನಾನನ್​ ಜಿಲ್ಲೆಯ 2 ಎತ್ತರದ ವಸತಿ ಕಟ್ಟಡಗಳ ನಡುವೆ ಈ ಬುದ್ಧನ ಪ್ರತಿಮೆ ಪತ್ತೆಯಾಗಿದೆ.

ಪ್ರತಿಮೆಯ ಚಿತ್ರಗಳು ಆನ್​​ಲೈನ್​​ನಲ್ಲಿ ವೈರಲ್​ ಆದ ಬಳಿಕ ಚೀನಾ ಅಧಿಕಾರಿಗಳ ಗಮನ ಸೆಳೆದಿದೆ. ಪ್ರತಿಮೆ ಸಮೀಪದ ನಿವಾಸಿಗಳು ಸ್ಥಳೀಯ ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನನ್​ ಜಿಲ್ಲೆಯ ಸಾಂಸ್ಕ್ರತಿಕ ಪರಂಪರೆ ಇಲಾಖೆ ಇನ್ನೂ ಶಿಲ್ಪಕಲೆ ಅಧ್ಯಯನ ಮಾಡಿ ಅದರ ಸಂರಕ್ಷಣೆ ಬಗ್ಗೆ ಯೋಚನೆ ಮಾಡಬೇಕಿದೆ.

TRENDING