ನವದೆಹಲಿ, ಡಿ. 20: ಭಾರತದಲ್ಲಿ 24 ಗಂಟೆಯಲ್ಲಿ 26,624 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. 341ಜನರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,45,477ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ 29,690 ಜನರು ಗುಣಮುಖಗೊಂಡಿದ್ದಾರೆ. ಇದುವರೆಗೂ ಗುಣಮುಖಗೊಂಡವರ ಒಟ್ಟು ಸಂಖ್ಯೆ 95,80,402.
ಭಾರತದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,00,31,223ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳು 3,05,344. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಶನಿವಾರ ದೇಶದಲ್ಲಿ ಹೊಸ ಪ್ರಕರಣಗಳು ಶೇ 5.8ರಷ್ಟು ಏರಿಕೆಯಾಗಿದೆ.
ಡಿಸೆಂಬರ್ 19ರ ತನಕ ದೇಶದಲ್ಲಿ 16,11,98,195 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಡಿಸೆಂಬರ್ 19ರಂದು 11,07,681 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ಯಾವ ರಾಜ್ಯದಲ್ಲಿ ಎಷ್ಟು? : ಭಾರತದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದಲ್ಲಿ ಶನಿವಾರ 3940 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 18,92,707ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 61,095.
ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 1152 ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 9,08,275ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 14,370.
ಆಂಧ್ರಪ್ರದೇಶ 8,78,285. ತಮಿಳುನಾಡು 8,05,777. ಕೇರಳ 7,00,159. ದೆಹಲಿ 6,15,914. ಉತ್ತರ ಪ್ರದೇಶದಲ್ಲಿ 5,73,401 ಪ್ರಕರಣಗಳು ದಾಖಲಾಗಿವೆ.