ನವದೆಹಲಿ : ಕಳೆದ 9 ತಿಂಗಳಲ್ಲಿ ರೈಲ್ವೆ ಇಲಾಖೆಯ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ಸಾವಿರ ನೌಕರರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಭಾರತೀಯ ರೈಲ್ವೆ ಮಂಡಳಿ ತಿಳಿಸಿದೆ.
ರೈಲ್ವೆ ಇಲಾಖೆಯ ಉತ್ತಮ ಚಿಕಿತ್ಸೆಯ ಪರಿಣಾಮದಿಂದ ಸೋಂಕಿತ ನೌಕರರು ಗುಣಮುಖರಾಗಿದ್ದಾರೆ. ಆದರೆ.ಈವರೆಗೆ 700 ನೌಕರರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ ಎಂದು ರೈಲ್ವೆ ಮಂಡಳಿ ಮಾಹಿತಿ ನೀಡಿದೆ.
700 ಮಂದಿ ಕೊರೊನಾಕ್ಕೆ ಬಲಿಯಾದವರು ಮತ್ತು ಸೋಂಕಿಗೆ ತುತ್ತಾದವರಲ್ಲಿ ಹೆಚ್ಚಿನವರು ಲಾಕ್ ಡೌನ್ ವೇಳೆ ವಲಸೆ ಕಾರ್ಮಿಕರನ್ನು ತವರಿಗೆ ರವಾನಿಸಲು ಆರಂಭಿಸಲಾದ ವಿಶೇಷ ರೈಲುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರೇ ಆಗಿದ್ದಾರೆ ಎಂದು ಹೇಳಿದೆ.