ಗುವಾಹತಿ: ಅಸ್ಸಾಂನಲ್ಲಿ 20 ಅನಿಲ ಸಿಲಿಂಡರ್ ಗಳು ಸ್ಫೋಟಗೊಂಡ ಪರಿಣಾಮ, ಬರೊಬ್ಬರಿ 66 ಗುಡಿಸಲುಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.
ಗುವಾಹತಿಯ ಜಲುಕ್ ಬರಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಒಂದು ಗುಡಿಸಲಿನ್ಲಲಿ ಬೆಂಕಿ ಕಾಣಿಸಿಕೊಂಡ ನಂತರ ಅದು ಇತರೆ ಗುಡಿಸಲುಗಳಿಗೆ ಹರಡಿದೆ. ಈ ವೇಳೆ ಮನೆಗಳಲ್ಲಿ ಇರಿಸಲಾಗಿದ್ದ ಎಲ್ಪಿಜಿ ಸಿಲಿಂಡರ್ಗಳು ಒಂದರ ಬಳಿಕ ಒಂದರಂತೆ ಸ್ಫೋಟಗೊಂಡಿದ್ದು, ಒಟ್ಟು 20 ಸಿಲಿಂಡರ್ ಗಳು ಸ್ಫೋಟಗೊಂಡಿದ್ದು, ಇದೇ ವೇಳೆ 66 ಗುಡಿಸಲುಗಳು ಭಸ್ಮವಾಗಿದೆ.
ಇನ್ನು ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಸ್ತುತ 14 ಅಗ್ನಿ ಶಾಮಕ ವಾಹನಗಳು ಸುಮಾರು ಮೂರು ಗಂಟೆಗಳ ನಿರಂತರ ಶ್ರಮಿಸಿ ಬೆಂಕಿ ನಂದಿಸಿವೆ.