Wednesday, January 27, 2021
Home ದೆಹಲಿ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಮುಖ್ಯಸ್ಥೆ ,ರಾಹುಲ್ ಗಾಂಧಿ ಆಪ್ತೆ ರುಚಿ ಗುಪ್ತಾ ರಾಜಿನಾಮೆ

ಇದೀಗ ಬಂದ ಸುದ್ದಿ

ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಮುಖ್ಯಸ್ಥೆ ,ರಾಹುಲ್ ಗಾಂಧಿ ಆಪ್ತೆ ರುಚಿ ಗುಪ್ತಾ ರಾಜಿನಾಮೆ

ನವದೆಹಲಿ: ಸಾಂಸ್ಥಿಕ ಬದಲಾವಣೆಗಳಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗ ಎನ್ ಎಸ್ ಯು ಐ ನಾಯಕಿ ರುಚಿ ಗುಪ್ತಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಸೋನಿಯಾ ಗಾಂಧಿ ಬಂಡಾಯ ನಾಯಕರ ಜೊತೆ ಸಭೆ ನಡೆಸುತ್ತಿರುವಾಗಲೇ ರುಚಿ ಗುಪ್ತಾ ರಾಜಿನಾಮೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ರುಚಿ ಗುಪ್ತಾ ಎನ್ ಎಸ್ ಯು ಐ ನ ಜಂಟಿ ಕಾರ್ಯದರ್ಶಿಯಾಗಿದ್ದರು. ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆ ತರುವಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ವಿಳಂಬ ಮಾಡುತ್ತಿದ್ದಾರೆ ಎಂದು ರುಚಿ ಗುಪ್ತಾ
ತಮ್ಮ ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದ್ದಾರೆ.

“ನಾನು ರಾಜೀನಾಮೆ ನೀಡಿದ್ದೇನೆ ಎಂದು ಘೋಷಿಸಲು ವಿಷಾದಿಸುತ್ತೇನೆ. ನನಗೆ ಈ ಅವಕಾಶವನ್ನು ನೀಡಿದ ರಾಹುಲ್ ಮತ್ತು ಸೋನಿಯಾ (ರಾಹುಲ್ ಗಾಂಧಿ ಮತ್ತುಸೋನಿಯಾ ಗಾಂಧಿ) ಅವರಿಗೆ ನಾನು ಆಭಾರಿಯಾಗಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

TRENDING