Wednesday, January 27, 2021
Home ಸುದ್ದಿ ಜಾಲ ಟೋಲ್ ಪ್ಲಾಜಾಗಳಲ್ಲಿ ನಗದು ಶುಲ್ಕ ಪಾವತಿ ರದ್ದು, ಜ. 1 ರಿಂದ ಫಾಸ್ಟ್ಯಾಗ್ ಕಡ್ಡಾಯ

ಇದೀಗ ಬಂದ ಸುದ್ದಿ

ಟೋಲ್ ಪ್ಲಾಜಾಗಳಲ್ಲಿ ನಗದು ಶುಲ್ಕ ಪಾವತಿ ರದ್ದು, ಜ. 1 ರಿಂದ ಫಾಸ್ಟ್ಯಾಗ್ ಕಡ್ಡಾಯ

ಬೆಂಗಳೂರು: ಟೋಲ್ ಪ್ಲಾಜಾಗಳಲ್ಲಿ ಜನವರಿ 1 ರಿಂದ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ನಗದು ಶುಲ್ಕ ಪಾವತಿ ವ್ಯವಸ್ಥೆ ರದ್ದಾಗಲಿದೆ.

ವಾಹನ ದಟ್ಟಣೆ ಕಡಿಮೆ ಮಾಡುವುದು, ಇಂಧನ ಉಳಿತಾಯ ಸೇರಿದಂತೆ ಹಲವು ಕಾರಣಗಳಿಂದ ಕಳೆದ ಜನವರಿ 15 ರಿಂದ ಟೋಲ್ ಶುಲ್ಕವನ್ನು ಫಾಸ್ಟ್ಯಾಗ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಪ್ರತ್ಯೇಕ ಪಥ ನಿಗದಿ ಮಾಡಲಾಗಿದ್ದು, ಜನವರಿ 1 ರಿಂದ ಫಾಸ್ಟಾಗ್ ಇಲ್ಲದ ವಾಹನಗಳು ಫಾಸ್ಟ್ಯಾಗ್ ಪಥದಲ್ಲಿ ಸಾಗಿದರೆ ಎರಡು ಪಟ್ಟು ಶುಲ್ಕ ಪಾವತಿಸಬೇಕಿದೆ.

ಕೇಂದ್ರ ಸರ್ಕಾರ ನಿಯೋಜಿಸಿದ 22 ಬ್ಯಾಂಕ್ ಶಾಖೆಗಳು, ನಿಗದಿತ ಪೆಟ್ರೋಲ್ ಬಂಕ್ ಗಳು, ಟೋಲ್ ಪ್ಲಾಜಾ ಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರಗಳಲ್ಲಿ ಫಾಸ್ಟ್ಯಾಗ್ ಸ್ಟಿಕರ್ ದೊರೆಯುತ್ತವೆ. ಇದಕ್ಕಾಗಿ ಆರ್.ಸಿ., ಡಿಎಲ್, 2 ಪಾಸ್ಪೋರ್ಟ್ ಸೈಜ್ ಫೋಟೋ, ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ನಲ್ಲಿ ಯಾವುದಾದರೊಂದು ಗುರುತಿನ ಚೀಟಿ ನೀಡಬೇಕಿದೆ. ದೃಢೀಕರಣ ಪತ್ರ ನೀಡಲಾಗುವುದು ಆನ್ಲೈನ್ ನಲ್ಲಿಯೂ ಫಾಸ್ಟ್ಯಾಗ್ ಖರೀದಿಸಬಹುದು ಎಂದು ಹೇಳಲಾಗಿದೆ.

TRENDING