Wednesday, January 20, 2021
Home ಸುದ್ದಿ ಜಾಲ ಮೊದಲ ವರ್ಷದ ಯುಜಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯುಜಿಸಿಯಿಂದ ಸಿಹಿ ಸುದ್ದಿ

ಇದೀಗ ಬಂದ ಸುದ್ದಿ

ಮೊದಲ ವರ್ಷದ ಯುಜಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯುಜಿಸಿಯಿಂದ ಸಿಹಿ ಸುದ್ದಿ

ನವದೆಹಲಿ : ಕೊರೋನಾ ವೈರಸ್ ಹಿನ್ನೆಲೆಯಲ್ಲಿ 2020-21 ನೇ ಸಾಲಿನ ಮೊದಲ ವರ್ಷದ ಯುಜಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದಾಖಲಾತಿ ಶುಲ್ಕ ವಾಪಾಸ್ ನೀಡುವಂತೆ ಯುನಿವರ್ಸಿಟಿ ಗ್ರಾಂಟ್ ಕಮಿಷನ್ (ಯುಜಿಸಿ) ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಆದೇಶ ನೀಡಿದೆ ಎಂದು ಡಿಐಪಿಆರ್ ವರದಿ ಮಾಡಿದೆ.

ಕೊರೋನಾದಿಂದಾಗಿ ಲಾಕ್ ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಪೋಷಕರು ಭಾರಿ ಕಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ, ನವಂಬರ್ 30, 2020 ರವರೆಗಿನ ಅಡ್ಮಿಶನ್ / ಅಡ್ಮಿಶನ್ ವಿಡ್ರಾವಲ್ ಮಾಡಿದ ಎಲ್ಲರ ದಾಖಲಾತಿ ಶುಲ್ಕವನ್ನು ಪೂರ್ತಿಯಾಗಿ ವಾಪಾಸ್ ನೀಡುವಂತೆ ಆದೇಶ ನೀಡಿದೆ. ಡಿಸೆಂಬರ್ 30 ರವರೆಗೂ ಯಾರು ಅಡ್ಮಿಶನ್ / ಅಡ್ಮಿಶನ್ ವಿಡ್ರಾವಲ್ ಮಾಡುತ್ತಾರೆ ಎಲ್ಲಾ ವಿದ್ಯಾರ್ಥಿಗಳ ಶುಲ್ಕವನ್ನು ರಿಫಂಡ್ ಮಾಡಬೇಕು, ಕೇವಲ ೧೦೦೦ ರೂ. ಗಿಂತ ಕಡಿಮೆ ಹಣವನ್ನು ಮಾತ್ರ ಕಡಿತ ಮಾಡಬೇಕು ಎಂದು ಯುಜಿಸಿ ತನ್ನ ಆದೇಶದಲ್ಲಿ ತಿಳಿಸಿದೆ.

ಯುಜಿಸಿ ಗೈಡ್ ಲೈನ್ಸ್ ಗಳನ್ನು ಮುರಿದಿರುವ ಬಗ್ಗೆ ಯುನಿವರ್ಸಿಟಿ ಮತ್ತು ಕಾಲೇಜುಗಳ ವಿರುದ್ಧ ಯುಜಿಸಿ ಗೆ ನೂರಾರು ಆರ್ ಟಿಐ ಅರ್ಜಿ, ದೂರುಗಳು, ಸಾರ್ವಜನಿಕ ಅರ್ಜಿ ಮತ್ತು ಕೋರ್ಟ್ ಕೇಸುಗಳು ಬಂದಿರುವ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದೆ.

TRENDING