Sunday, January 24, 2021
Home ದೆಹಲಿ 'ಕೊರೊನಾ' ಲಸಿಕೆ ಪಡೆಯುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಹೇಳಿಕೆ

ಇದೀಗ ಬಂದ ಸುದ್ದಿ

‘ಕೊರೊನಾ’ ಲಸಿಕೆ ಪಡೆಯುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಹೇಳಿಕೆ

ಕಳೆದ ಒಂದು ವರ್ಷದಿಂದ ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ. ಇದರ ನಿರ್ಮೂಲನೆಗೆ ಲಸಿಕೆ ಸಿದ್ಧವಾಗಿದ್ದು, ಈಗಾಗಲೇ ಕೆಲ ದೇಶಗಳಲ್ಲಿ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಲಸಿಕೆ ಮುಂದಿನ ವರ್ಷದ ಆರಂಭದಲ್ಲಿ ಲಭ್ಯವಾಗಲಿದೆ ಎನ್ನಲಾಗಿದ್ದು, ಸಾರ್ವಜನಿಕರು ಲಸಿಕೆ ಪಡೆಯುವ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಹೇಳಿಕೆ ನೀಡಿದೆ. ಕೊರೊನಾ ತಡೆ ಲಸಿಕೆ ಪಡೆಯುವುದು ಸಾರ್ವಜನಿಕರ ಸ್ವ ಇಚ್ಛೆಗೆ ಬಿಟ್ಟ ವಿಷಯ ಎಂದಿರುವ ಆರೋಗ್ಯ ಸಚಿವಾಲಯ, ಆದಾಗ್ಯೂ ಕೂಡಾ ಇದನ್ನು ಪಡೆದುಕೊಳ್ಳುವುದು ಸೂಕ್ತ ಎಂದು ಹೇಳಿದೆ

TRENDING