Monday, January 18, 2021
Home ಕೋವಿಡ್-19 ಪಾಕಿಸ್ತಾನದ ಕೊರೊನಾ ನಿಯಂತ್ರಣ ಸಂಸ್ಥೆ ಮುಖ್ಯಸ್ಥರಿಗೇ ಕೊರೊನಾ ಸೋಂಕು.!

ಇದೀಗ ಬಂದ ಸುದ್ದಿ

ಪಾಕಿಸ್ತಾನದ ಕೊರೊನಾ ನಿಯಂತ್ರಣ ಸಂಸ್ಥೆ ಮುಖ್ಯಸ್ಥರಿಗೇ ಕೊರೊನಾ ಸೋಂಕು.!

ಪಾಕಿಸ್ತಾನದ ಯೋಜನಾ ಮಂತ್ರಿ ಹಾಗೂ ಕೊರೊನಾ ವೈರಸ್​ ನಿಯಂತ್ರಣ ಸಂಸ್ಥೆ ಮುಖ್ಯಸ್ಥರೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಪಾಕಿಸ್ತಾನ ಯೋಜನಾಭಿವೃದ್ಧಿ ಹಾಗೂ ವಿಶೇಷ ಉಪಕ್ರಮಗಳ ಸಚಿವ ಅಸಾದ್​ ಉಮರ್​, ನನ್ನ ಕೋವಿಡ್ ಪರೀಕ್ಷಾ ವರದಿ ಕೈ ಸೇರಿದ್ದು, ನಾನು ಸೋಂಕಿಗೆ ಒಳಗಾಗಿದ್ದೇನೆ. ಸದ್ಯ ಮನೆಯಲ್ಲಿ ಪ್ರತ್ಯೇಕವಾಗಿ ಇರಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್​ಗೆ ತುತ್ತಾದ ತೀರಾ ಇತ್ತೀಚಿನ ಪಾಕಿಸ್ತಾನಿ ರಾಜಕಾರಣಿ ಇವರಾಗಿದ್ದಾರೆ. ಸಿಂಧ್​ ಗವರ್ನರ್​ ಇಮ್ರಾನ್​ ಇಸ್ಮಾಯಿಲ್​, ಸಿಂಧ್​ ಸಿಎಂ ಮುರಾದ್​ ಅಲಿ ಶಾ, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್​ ಅಸದ್​ ಖೈಸರ್​, ವಿದೇಶಾಂಗ ಸಚಿವ ಶಾ ಮಹಮೂದ್​ ಖುರೇಷಿ ಸೇರಿದಂತೆ ಅನೇಕರು ಈವರೆಗೆ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ.

TRENDING