Thursday, January 21, 2021
Home ಬೆಂಗಳೂರು ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಮೊಬೈಲ್ ನಾಪತ್ತೆ!

ಇದೀಗ ಬಂದ ಸುದ್ದಿ

ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಮೊಬೈಲ್ ನಾಪತ್ತೆ!

 ಬೆಂಗಳೂರು: ನಾಗರಬಾವಿಯಲ್ಲಿದ್ದ ಗೆಳೆಯನ ಸ್ನೇಹಿತನ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸಿಐಡಿ ಡಿವೈಎಸ್​ಪಿ ವಿ. ಲಕ್ಷ್ಮೀ ಅವರ ಮೊಬೈಲ್ ನಾಪತ್ತೆಯಾಗಿದೆ. ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಡಿ.16ರ ರಾತ್ರಿ ಮನೋಹರ್ ಮನೆಯಲ್ಲಿ ಪಾರ್ಟಿಗೆ ಹೋದಾಗ ಲಕ್ಷ್ಮೀ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎನ್ನಲಾಗಿದೆ. ಪಾರ್ಟಿಗೆ ಸೇರಿದ್ದ ಮನೋಹರ್, ದೇವರಾಜ್, ಪ್ರಜ್ವಲ್, ಧಮೇಗೌಡನನ್ನು ವಶದಲ್ಲಿಟ್ಟು ಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸ್ನೇಹಿತರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗೂ ಪೂರಕ ದಾಖಲೆಗಳು ಮತ್ತು ಸಾಕ್ಷ್ಯಗಳು ಪತ್ತೆ ಮಾಡ ಲಾಗುತ್ತಿದೆ. ಮುಖ್ಯವಾಗಿ ಲಕ್ಷ್ಮೀ ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿಲ್ಲ. ಕೋಣನಕುಂಟೆ ಮನೆ ಮತ್ತು ಘಟನೆ ನಡೆದ ಫ್ಲಾಯಟ್, ಸುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಲಾಗಿದೆ ಇಲ್ಲಿಯವರೆಗೂ ಸಿಕ್ಕಿಲ್ಲ. ಮೊಬೈಲ್ ಪತ್ತೆಯಾದರೆ ಹೆಚ್ಚಿನ ಮಾಹಿತಿ ಸಿಗಲಿದೆ. ಸ್ಥಳ ಮಹಜರು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಷ್ಮೀ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆ ವೈದ್ಯರ ಕಡೆಯಿಂದ ಹೇಳಿಕೆ ಮತ್ತು ದಾಖಲೆ ಸಂಗ್ರಹಿಸಲಾಗಿದೆ. ಡಿವೈಎಸ್​ಪಿ ಕುಟುಂಬ ಸದಸ್ಯರಾದ ತಂದೆ, ತಾಯಿ, ಪತಿ ಸೇರಿ ಎಲ್ಲರ ಹೇಳಿಕೆ ಪಡೆಯಲಾಗಿದೆ. ಆಸ್ತಿ, ಕೌಟುಂಬಿಕ, ಕಚೇರಿ ಸೇವೆ ಇನ್ನಿತರ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಫ್ಲಾಯಟ್ ಮಾಲೀಕ ಮನೋಹರ್, ಕುಟುಂಬದೊಂದಿಗೆ ಬೇರೆ ಮನೆಯಲ್ಲಿ ನೆಲೆಸಿದ್ದ. ಫ್ಲಾಯಟ್ ಅನ್ನು ಮೋಜಿನ ಕೂಟಕ್ಕಾಗಿಯೇ ಇಟ್ಟುಕೊಂಡಿದ್ದ ಎನ್ನಲಾಗುತ್ತಿದೆ.

ಪ್ರತಿಕ್ರಿಯೆ ನೀಡಿರಲಿಲ್ಲ

ಡಿವೈಎಸ್​ಪಿ ಲಕ್ಷ್ಮೀ ಮಾಡಿದ್ದ ಆಡಿಯೋ ಸಂದೇಶ ಗಳನ್ನು ಸ್ನೇಹಿತ ಮನೋಹರ್ ನೋಡಿರಲಿಲ್ಲ. ಯಾವುದೇ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನಲಾಗಿದೆ.

ಸರ್ಕಾರಿ ಉನ್ನತ್ತ ಹುದ್ದೆಯಲ್ಲಿ ಇರುವ ಅಧಿಕಾರಿ ಸಾವಿನ ಪ್ರಕರಣ. ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಯಾಮಗಳಲ್ಲಿ ಸಮಗ್ರ ತನಿಖೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ.

TRENDING