Sunday, January 24, 2021
Home ಜಿಲ್ಲೆ ಕೋಲಾರ ಕೋಲಾರ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ್ಯ ಚಿನ್ನಸ್ವಾಮಿ ಗೌಡ ವಿರುದ್ಧ ಕೇಸ್ ದಾಖಲು

ಇದೀಗ ಬಂದ ಸುದ್ದಿ

ಕೋಲಾರ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ್ಯ ಚಿನ್ನಸ್ವಾಮಿ ಗೌಡ ವಿರುದ್ಧ ಕೇಸ್ ದಾಖಲು

 ಕೋಲಾರ (ಡಿ. 19): ಕೋಲಾರ ಜಿಲ್ಲೆಯಲ್ಲಿ ಜನಪ್ರತಿನಿಧಿಯೊಬ್ಬರು ಗೂಂಡಾ ವರ್ತನೆ ತೋರಿ, ದಾದಾಗಿರಿ ನಡೆಸುವ ಮಟ್ಟಕ್ಕೆ ಅಟ್ಟಹಾಸ ಪ್ರದರ್ಶಿಸಿದ್ದು, ಇದೀಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಕೋಲಾರ ಜಿಲ್ಲಾ ಪಂಚಾಯಿತಿ, ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ ಗೌಡ, ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ಆಲ್ ಕಾರ್ಗೋ ಖಾಸಗಿ ಕಂಪನಿಯ ಸೂಪರ್ ವೈಸರ್ ಬಳಿ ಮಾತನಾಡಿರುವ ಆಡಿಯೋ ತುಣುಕುಗಳು ಸಾಕಷ್ಟು ಸದ್ದು ಮಾಡುತ್ತಿದೆ. ಕಂಪನಿಗೆ ಆಹಾರ ಸರಬರಾಜು ಮಾಡುವರು ತನಗೆ ಕಮಿಷನ್ ಕೊಡಬೇಕು ಎಂದು ಆರಂಭವಾದ ಮಾತಿನ ವಾಗ್ವಾದದಲ್ಲಿ, ಸಹನೆ ಕಳೆದುಕೊಂಡ ಅಧ್ಯಕ್ಷ್ಯ ಚಿನ್ನಸ್ವಾಮಿ ಗೌಡ, ಹಣ ಕೊಡದೇ ಹೋದಲ್ಲಿ ಕಾರ್ಮಿಕರು ತಿನ್ನುವ ಅನ್ನಕ್ಕೆ ವಿಷ ಹಾಕುವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಊಟ ಸರಬರಾಜು ಮಾಡುವ ವಾಹನಕ್ಕೆ ಬೆಂಕಿ ಹಚ್ಚುವ ಬೆದರಿಕೆಯನ್ನ ಹಾಕಿದ್ದಾರೆಹತ್ತಿರದಲ್ಲೇ ಗ್ರಾಮ ಪಂಚಾಯಿತಿ ಚುನಾವಣೆ ಇದೆ, ಖರ್ಚಿಗೆ ಹಣವಿಲ್ಲ, ನಾವು ಲೋಕಲ್ ಇದೀವಿ, ನನ್ನ ಹೆಂಡತಿ ಉಪಾಧ್ಯಕ್ಷ್ಯೆ, ಮಗ ಸದಸ್ಯ ಇದಾನೆ. ನಾವು ಏನಕ್ಕೂ ಲೆಕ್ಕಕ್ಕೆ ಇಲ್ವ? ಇಲ್ಲಿ ಎಲ್ಲವನ್ನೂ ನಾವೇ ನೋಡಿಕೊಳ್ಳೋದು. ನಮಗೆ ಕಮಿಷನ್ ಕೊಡದಿದ್ದರೆ ಅಷ್ಟೆ ಎಂದು ಅವರು ಬೆದರಿಕೆ ಹಾಕಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷ್ಯನ ವರ್ತನೆಯನ್ನು ಖಂಡಿಸಿರುವ ಮಾಲೂರು ಶಾಸಕ ನಂಜೇಗೌಡ, ಇಂತಹ ಗೂಂಡಾಗಿರಿ ನಮ್ಮ ತಾಲೂಕಿನಲ್ಲಿ ನಡೆಯಬಾರದು. ಜನರು ನೆಮ್ಮದಿಯಿಂದ ಜೀವನ ನಡೆಸಬೇಕು. ದೌರ್ಜನ್ಯ ದಬ್ಬಾಳಿಕೆಗೆ ಇಲ್ಲಿ ಸ್ಥಾನವಿಲ್ಲ. ಮೊನ್ನೆಯಷ್ಟೆ ವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆಯಾಗಿ, ಜಿಲ್ಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿದೆ. ಆದರೆ, ಜನಪ್ರತಿನಿಧಿಗಳಾದ ನಮ್ಮ ವರ್ತನೆಯು ಬದಲಾಗಬೇಕು. ನಾನು ಜಿಲ್ಲಾಧಿಕಾರಿ ಹಾಗೂ ಪೊಲೀಸ್​ ಇಲಾಖೆಗೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದೇನೆ ಎಂದು ಘಟನೆಯನ್ನು ಖಂಡಿಸಿದ್ದಾರೆ.

ಸದಸ್ಯ ಚಿನ್ನಸ್ವಾಮಿ ಗೌಡ ಆಲ್ ಕಾರ್ಗೋ ಕಂಪನಿಯ ಸಿಬ್ಬಂದಿಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿರೊ ಹಿನ್ನಲೆ, ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಕೋಲಾರದಲ್ಲಿ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ‌ ಕಂಪನಿಯ ಸಿಬ್ಬಂದಿಯಿಂದ ದೂರು ಪಡೆದುಕೊಂಡಿದ್ದು, ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

TRENDING