ಮೈಸೂರು: ಯೂರಿಯಾ ಎಂಬ ರಸಗೊಬ್ಬರ ತಿಂದು ಎರಡು ಎತ್ತುಗಳು ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜೇಗೌಡ ಎಂಬವರಿಗೆ ಸೇರಿದ ಎತ್ತುಗಳು ಮೃತಪಟ್ಟಿರುವುದು. ಎತ್ತುಗಳನ್ನು 1.25 ಲಕ್ಷ ರೂ.ಗೆ ಕೊಂಡು ತರಲಾಗಿತ್ತು.
ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆಗೆ ಯೂರಿಯಾ ಗೊಬ್ಬರ ಹಾಕಲು ಒಂದು ಚೀಲ ತಂದು ಇಡಲಾಗಿತ್ತು. ಎತ್ತುಗಳು ಮೇಯುತ್ತಿದ್ದಾಗ ಹತ್ತಿರದಲ್ಲೇ ಇದ್ದ ಯೂರಿಯಾ ಗೊಬ್ಬರವನ್ನೂ ತಿಂದುಬಿಟ್ಟಿವೆ. ನಂತರ ಒದ್ದಾಡಿ ಸಾವಿಗೀಡಾಗಿವೆ.
ಸ್ಥಳಕ್ಕೆ ಬೆಟ್ಟದಪುರ ಪಶು ವೈದ್ಯಾಧಿಕಾರಿ ಭೇಟಿ ನೀಡಿ ಮಹಜರ್ ಮಾಡಿ ಸರ್ಕಾರಕ್ಕೆ ಪರಿಹಾರ ಸಂಬಂಧ ವರದಿ ಮಾಡಲಾಗುವುದು ಎಂದು ಭರವಸೆ ನೀಡಿದರು.