Wednesday, January 27, 2021
Home ದೆಹಲಿ ಪ್ರಧಾನಿ ಮೋದಿಯ ವಾರಾಣಸಿ ಕಚೇರಿಯನ್ನು OLXನಲ್ಲಿ ಮಾರಾಟಕ್ಕಿಟ್ಟ ನಾಲ್ವರು ಅರೆಸ್ಟ್

ಇದೀಗ ಬಂದ ಸುದ್ದಿ

ಪ್ರಧಾನಿ ಮೋದಿಯ ವಾರಾಣಸಿ ಕಚೇರಿಯನ್ನು OLXನಲ್ಲಿ ಮಾರಾಟಕ್ಕಿಟ್ಟ ನಾಲ್ವರು ಅರೆಸ್ಟ್

 ವಾರಾಣಸಿ, ಡಿ.18: ಪ್ರಧಾನಿ ನರೇಂದ್ರ ಮೋದಿಯವರ ವಾರಾಣಸಿ ಕಚೇರಿಯನ್ನು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಖದೀಮರು ನರೇಂದ್ರ ಮೋದಿಯವರ ಕಚೇರಿಯನ್ನು 7.5 ಕೋಟಿ ರೂಗೆ ಮಾರಾಟಕ್ಕಿಟ್ಟಿದ್ದರು. ಹಾಗೆಯೇ ಫೋಟೊವನ್ನು ಕೂಡ ಹಂಚಿಕೊಂಡಿದ್ದರು.ಇದೀಗ ಆರೋಪಿಗಳನ್ನು ಹಿಡಿದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಾರಾಣಸಿಯ ಕಚೇರಿ ಮಾರಾಟಕ್ಕಿದೆ. ನಾಲ್ಕು ರೂಮ್‌ಗಳು, ನಾಲ್ಕು ಬಾತ್‌ರೂಂಗಳು, 6500 ಚದರಡಿ ಕಾರ್ಪೆಟ್ ಪ್ರದೇಶವನ್ನು ಒಳಗೊಂಡಿದೆ ಎಂದು ಬರೆದಿದ್ದರು.

ಒಎಲ್‌ಕ್ಸ್‌ನಲ್ಲಿ ಹಾಕಲಾಗಿದ್ದ ಜಾಹೀರಾತನ್ನು ಇದೀಗ ಡಿಲೀಟ್ ಮಾಡಿಸಲಾಗಿದೆ. ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿದವರಲ್ಲಿ ಓರ್ವ ಲಕ್ಷ್ಮೀಕಾಂತ್ ಓಜಾ ಕಟ್ಟಡದ ಫೋಟೊವನ್ನು ನೀಡಿದ್ದ ಎನ್ನಲಾಗಿದೆ.

TRENDING