Saturday, January 23, 2021
Home ಅಂತರ್ ರಾಜ್ಯ ತಮಿಳುನಾಡು ತಮಿಳುನಾಡಿಗೆ ವೈ. ಎಸ್.ಜಗನ್ ಅವರಂತ ಸಿಎಂ ಬೇಕು : ಕೃಷ್ಣ ರಾವ್

ಇದೀಗ ಬಂದ ಸುದ್ದಿ

ತಮಿಳುನಾಡಿಗೆ ವೈ. ಎಸ್.ಜಗನ್ ಅವರಂತ ಸಿಎಂ ಬೇಕು : ಕೃಷ್ಣ ರಾವ್

ಅಮರಾವತಿ ತಮಿಳುನಾಡಿನ ಜನರಿಗೆ ಜಗನ್ ಮೋಹನ್ ರೆಡ್ಡಿ ಅವರಂತಹ ಮುಖ್ಯಮಂತ್ರಿ ಬೇಕು ಎಂದು ಪುದುಚೇರಿ ಮಲ್ಲಾಡಿ ಕೃಷ್ಣ ರಾವ್ ಹೇಳಿದ್ದಾರೆ. ಅಮರಾವತಿಯಲ್ಲಿ 139 ಜಾತಿಗಳ 728 ನಾಯಕರು ನಿರ್ದೇಶಕ ಮತ್ತು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು,

ತಮಿಳುನಾಡಿನ ಜನರಿಗೆ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರಂತಹ ಮುಖ್ಯಮಂತ್ರಿ ಬೇಕು ಎಂದ ಸಚಿವರು, ಆಂಧ್ರಪ್ರದೇಶದಲ್ಲಿ 56 ಹಿಂದುಳಿದ ವರ್ಗಗಳ ನಿಗಮಗಳನ್ನು ರಚಿಸುವ ಜಗನ್​ ಅವರ ಕಾರ್ಯವನ್ನು ಶ್ಲಾಘಿಸಿದರು. ಹಿಂದುಳಿದ ವರ್ಗದ ಸಚಿವರಾಗಿರುವ ರಾವ್​ ಅವರು, ಆಂಧ್ರಪ್ರದೇಶದಲ್ಲಿ ಒಬಿಸಿ ಸಮುದಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿರುವುದು ಐತಿಹಾಸಿಕವಾಗಿದೆ.

ಹೆಚ್ಚು ಮಹತ್ವವುಳ್ಳದಾಗಿದೆ ಎಂದರು. ಸಿಎಂ ಜಗನ್ ಅವರು ಬಿಸಿ ಸಮುದಾಯಕ್ಕೆ ಸೇವೆ ಸಲ್ಲಿಸಲು ನೀಡಿದ್ದ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಜಗನ್​ ಅವರು ಮುಖ್ಯಮಂತ್ರಿಯಾಗಿರುವವರೆಗೂ ನಾನು ರಾಜೀನಾಮೆ ನೀಡಲು ಮತ್ತು ಅವರ ಸರ್ಕಾರಕ್ಕಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

TRENDING