Monday, January 25, 2021
Home ಸುದ್ದಿ ಜಾಲ ಬ್ಯಾಡ್ಮಿಂಟನ್ ಕ್ರೀಡಾ ದಂಪತಿ ವಿವಾಹ ವಾರ್ಷಿಕೋತ್ಸವ : ಫೋಟೊ ಹಂಚಿಕೊಂಡ ಸೈನಾ ನೆಹವಾಲ್

ಇದೀಗ ಬಂದ ಸುದ್ದಿ

ಬ್ಯಾಡ್ಮಿಂಟನ್ ಕ್ರೀಡಾ ದಂಪತಿ ವಿವಾಹ ವಾರ್ಷಿಕೋತ್ಸವ : ಫೋಟೊ ಹಂಚಿಕೊಂಡ ಸೈನಾ ನೆಹವಾಲ್

ಹೈದ್ರಾಬಾದ್: ಪ್ರಮುಖ ಬ್ಯಾಡ್ಮಿಂಟನ್ ಕ್ರೀಡಾ ದಂಪತಿ ಸೈನಾ ನೆಹವಾಲ್ ಹಾಗೂ ಪರುಪಲ್ಲಿ ಕಶ್ಯಪ್ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವಕ್ಕೆ ಅಡಿ ಇರಿಸಿದ್ದಾರೆ. ಈ ಕನಸಿನ ಜೋಡಿ ತಮ್ಮ ವಿವಾಹ ಬಂಧವನ್ನು ನೆನಪಿಸಿಕೊಂಡು ತಮ್ಮ ಅಹ್ಲಾದಕರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಡಿಸೆಂಬರ್ 17 ರ ಗುರುವಾರ ಈ ಜೋಡಿ ಎರಡು ವರ್ಷಗಳ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ದಂಪತಿ ವಿಹಾರ ಯಾತ್ರೆಯಲ್ಲಿ ಮುಳುಗಿದೆ. 2018 ರಲ್ಲಿ, ಈ ಪ್ರೇಮಿಗಳ ಜೋಡಿ ಒಂದಾಗಿತ್ತು. ತಮ್ಮ ಪ್ರೇಮ ಸಂಬಂಧ ವಿವರಿಸುವ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾಲ್ಡೀವ್ಸ್‌ನಲ್ಲಿರುವ ದಂಪತಿ, ನೀಲ ಸಾಗರದಲ್ಲಿ ನಿಂತು, ಫೋಟೋ ತೆಗೆದುಕೊಂಡು ಆನಂದಿಂದ ಕಳೆಯುತ್ತಿದ್ದಾರೆ.

TRENDING