Wednesday, January 27, 2021
Home ಸುದ್ದಿ ಜಾಲ 'ಫೇಸ್‌ ಬುಕ್‌'ನಲ್ಲಿ ಪರಿಚಯವಾದ ಗೆಳೆಯನೊಂದಿಗೆ ಗೃಹಿಣಿ ಎಸ್ಕೆಪ್ .!

ಇದೀಗ ಬಂದ ಸುದ್ದಿ

‘ಫೇಸ್‌ ಬುಕ್‌’ನಲ್ಲಿ ಪರಿಚಯವಾದ ಗೆಳೆಯನೊಂದಿಗೆ ಗೃಹಿಣಿ ಎಸ್ಕೆಪ್ .!

ಫೇಸ್‌ಬುಕ್ ಮೂಲಕ ಪರಿಚಯವಾಗಿ ಪ್ರೀತಿಗೆ ತಿರುಗೋದು ನಂತರ ಮನೆ ಬಿಟ್ಟು ಹೋಗೋದು ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇವೆ.

ಇದೀಗ ಇಂತಹದ್ದೇ ಮತ್ತೊಂದು ಘಟನೆ ರಾಜ್ಯದಲ್ಲಿ ನಡೆದಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾದವನ ಜೊತೆ ಗೃಹಿಣಿಯೊಬ್ಬಳು ಪರಾರಿಯಾಗಿರುವ ಘಟನೆ ನಡದಿದೆ.

ಹೌದು, ತಿ.ನರಸೀಪುರದ ಸರಕಾರಿ ಆಸ್ಪತ್ರೆಯ ವಾಟರ್ ಟ್ಯಾಂಕ್ ಬಳಿಯ ನಿವಾಸಿಯಾಗಿದ್ದ ಮಹಿಳೆಯೊಬ್ಬರು ಕಳೆದ ತಿಂಗಳು ಮನೆಯಿಂದ ಕಾಣೆಯಾಗಿದ್ದರು. ಈಕೆಗೆ ಮದುವೆಯಾಗಿ 5 ವರ್ಷ ಕಳೆದಿವೆ. ಆದರೆ ಮಕ್ಕಳಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಈಕೆ ಕಾಣೆಯಾದ ನಂತರ ಈಕೆಯ ಪತಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಆಕೆಯ ಪತಿಯ ದೂರಿನನ್ವಯ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ನಂತರ ಈಕೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಗ್ರಾಮದಲ್ಲಿ ಇರುವುದು ಗೊತ್ತಾಗಿದೆ. ಕಳೆದ 2 ವರ್ಷಗಳ ಹಿಂದೆ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಯುವಕನೊಂದಿಗೆ ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ.

TRENDING