ಶ್ರೀಹರಿಕೋಟಾ: ದೇಶದ ನೂತನ ಸಂಪರ್ಕ ಸೇವೆಯ ಉಪಗ್ರಹ ‘ಸಿಎಂಎಸ್ -01’ ಅನ್ನು ಇಸ್ರೊ ಗುರುವಾರ ಇಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿತು.
ಕೋವಿಡ್ ಸಂಕಷ್ಟ ಶುರುವಾದ ಬಳಿಕ ಈ ವರ್ಷ ನಡೆಯುತ್ತಿರುವ ಎರಡನೇ ಉಪಗ್ರಹ ಉಡಾವಣೆ ಇದು.
ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ವಿಶ್ವಾಸಾರ್ಹ ಪೊಲಾರ್ ಸ್ಯಾಟಲೈಟ್ ಉಡಾವಣಾ ವಾಹಕ -ಪಿಎಸ್ಎಲ್ವಿ-ಸಿ50- ಉಡಾವಣೆ ನಡೆದ 20 ನಿಮಿಷಗಳ ತರುವಾಯ ಕಕ್ಷೆಗೆ ಉಪಗ್ರಹವನ್ನು ತಲುಪಿಸುವಲ್ಲಿ ಯಶಸ್ವಿಯಾಯಿತು.
ಸಿಎಂಎಸ್-01 ಎಂಬುದು ಈ ಸರಣಿಯ 42ನೇ ಸಂಪರ್ಕ ಉಪಗ್ರಹವಾಗಿದೆ. ಇದು, ವಿಸ್ತರಿತ ಸಿ-ಬ್ಯಾಂಡ್ ಸಂಪರ್ಕ ಸೇವೆಯನ್ನು ಭಾರತ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪಗಳ ಭೌಗೋಳಿಕ ವ್ಯಾಪ್ತಿಗೆ ಅನ್ವಯಿಸಿ ಒದಗಿಸಲಿದೆ. ಈ ಉಪಗ್ರಹದ ಬಾಳಿಕೆಯ ಅವಧಿ ಏಳು ವರ್ಷ ಎಂದು ಇಸ್ರೊ ಮೂಲಗಳು ತಿಳಿಸಿವೆ.
ಪಿಎಸ್ಎಲ್ವಿ -ಸಿ50 ಎಂಬುದು ಪಿಎಸ್ಎಲ್ವಿ ಸರಣಿಯ 22ನೇ ಉಡಾವಣಾ ವಾಹಕವಾಗಿದ್ದು, ಒಟ್ಟು ಆರು ಮೋಟಾರ್ಗಳನ್ನು ಅಳವಡಿಸಲಾಗಿದೆ. ಶ್ರೀಹರಿಕೋಟಾದಿಂದ ನಡೆದ 77ನೇ ಉಪಗ್ರಹ ಉಡಾವಣಾ ಪ್ರಕ್ರಿಯೆ ಇದಾಗಿದೆ.
ನವೆಂಬರ್ 7ರಂದು ಪಿಎಸ್ ಎಲ್ವಿ-ಸಿ49 ಉಡಾವಣೆ ನಡೆ ದಿತ್ತು. ಈ ಉಡಾವಣೆಯು ಈ ವರ್ಷದ ಎರಡನೇ ಮತ್ತು ವರ್ಷದ ಕಡೆಯ ಉಪಗ್ರಹ ಉಡಾವಣಾ ಪ್ರಕ್ರಿಯೆಯಾಗಿದೆ.