ಮೈಸೂರು: ಚಾಮುಂಡೇಶ್ವರಿ ಸೋಲಿಗೆ ಒಳಸಂಚು ಕಾರಣ, ನಮ್ಮವರೇ ನನ್ನನ್ನ ಸೋಲಿಸಿದ್ರು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಇಂದು ನಡೆಸಿದ ಚಾಮುಂಡೇಶ್ವರಿ ಕ್ಷೇತ್ರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಜನರೇ ನೀವೇ ಹೇಳಿ ನನ್ನನ್ನ ಸೋಲಿಸಲು ಕಾರಣವೇನು? ಒಂದು, ಎರಡು, ಮೂರು, ನಾಲ್ಕು ಎಂದು ಕಾರಣ ನೀಡಿ. ನನ್ನ ವಿರುದ್ಧ ನಿಂತ ಅಭ್ಯರ್ಥಿಗಳ ಪ್ಲಸ್ ಪಾಯಿಂಟ್ ಏ-ನು ಎಂದು ನೀವೇ ಹೇಳಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜನರನ್ನ ಪ್ರಶ್ನಿಸಿದರು.
ಇನ್ನು ನನ್ನ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿಗೆ ನನ್ನ ಪಕ್ಷದವರೇ ನೇರ ಕಾರಣ. ಅವ್ರು ಮಾಡಿದ ಒಳಸಂಚಿನಿಂದಾಗಿ ನಾನು ಸೋಲು ಅನುಭವಿಸಬೇಕಾಯ್ತು ಎಂದರು.
ಕೊನೆಗೆ ಬಾದಾಮಿಯ ಜನ ನನ್ನ ಕೈ ಹಿಡಿದರು. ಅವ್ರು ನನ್ನನ್ನ ಕೈಬಿಟ್ಟಿದ್ದಾರೆ ನನ್ನ ರಾಜಕೀಯ ಜೀವನವೇ ಕತ್ತಲಾಗಿ ಹೋಗುತ್ತಿತ್ತು. ಆದ್ರೆ, ಜನ ನನ್ನನ್ನ ಸೋಲಿಸಲಿಲ್ಲ ಎಂದರು.