Wednesday, January 27, 2021
Home ಕ್ರೈಂ ನ್ಯೂಸ್ ಅಕ್ರಮ ಸಂಬಂಧಕ್ಕೆ ಅಡ್ಡಿ: ಪತಿಯನ್ನೇ ಕೊಂದ ಪತ್ನಿ

ಇದೀಗ ಬಂದ ಸುದ್ದಿ

ಅಕ್ರಮ ಸಂಬಂಧಕ್ಕೆ ಅಡ್ಡಿ: ಪತಿಯನ್ನೇ ಕೊಂದ ಪತ್ನಿ

ಮೈಸೂರು: ಪ್ರಿಯಕರನ ಆದೇಶ ಪಾಲಿಸಿದ ಪ್ರಿಯತಮೆ ತಾಳಿ ಕಟ್ಟಿದ ಗಂಡನನ್ನೆ ಕೊಲೆ ಮಾಡಿದ್ದ ನಿಗೂಢ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮೈಸೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಂಜನಗೂಡಿನ ಅಡ್ಡಹಳ್ಳಿಯ ಶಿವರಾಜ್ ಮತ್ತು ಸೌಮ್ಯ ಅವರ ಸಂಸಾರ ಚೆನ್ನಾಗಿಯೇ ಇತ್ತು. ಈ ಸಮಯದಲ್ಲಿ ಶುಂಠಿ ಕೆಲಸಕ್ಕೆ ಆಟೋದಲ್ಲಿ ಹೋಗುವ ವೇಳೆ ಚಾಲಕ ಯೋಗೇಶ್ ಜೊತೆ ಸೌಮ್ಯ ಸಲುಗೆ ಬೆಳಿಸಿದ್ದಳು. ಇವರಿಬ್ಬರ ಅಕ್ರಮ ಸಂಬಂಧ ಪತಿಗೆ ತಿಳಿಯಿತು. ಮುಂದೆ ಯಾವುದೇ ಕಾರಣಕ್ಕೂ ಶುಂಠಿ ಕೆಲಸಕ್ಕೆ ಹೋಗದಂತೆ ಶಿವರಾಜ್ ತಾಕೀತು ಮಾಡಿದನು.

ಇದರಿಂದ ಪ್ರಿಯತಮೆ ಸೌಮ್ಯಳನ್ನು ಭೇಟಿ ಮಾಡಲು ಆಟೋ ಚಾಲಕ ಯೋಗೇಶ್ ಗೆ ಸಾಧ್ಯವಿರಲಿಲ್ಲ. ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಶಿವರಾಜ್ ಮುಗಿಸಲು ಪತ್ನಿ ಸೌಮ್ಯ, ಪ್ರಿಯಕರ ಯೋಗೇಶ್ ಪ್ಲಾನ್ ಮಾಡಿದ್ರು. ಇದಕ್ಕೆ ಯೋಗೇಶ್ ತನ್ನ ಸ್ನೇಹಿತ ಚೆಲುವರಾಜ್ ನೆರವು ಪಡೆದನು. 

ಪ್ರಿಯಕರ ಯೋಗೇಶ್ ನ ಆದೇಶದಂತೆ ಸೌಮ್ಯ ಪತಿಗೆ ಕಂಠಪೂರ್ತಿ ಕುಡಿಸಿದಳು. ತರುವಾಯ ಯೋಗೇಶ್ ಮತ್ತು ಚಲುವರಾಜು ಜೊತೆ ಸೇರಿದ ಸೌಮ್ಯ ಡಿಸೆಂಬರ್ 7 ರಂದು ಶಿವರಾಜ್ ಕೈ ಕಾಲು ಕಟ್ಟಿ ಕಬಿನಿ ಬಲದಂಡೆ ನಾಲೆಗೆ ಶವ ಎಸೆದಿದ್ದರು. ಪತಿ ನಾಪತ್ತೆಯಾಗಿರುವ ಬಗ್ಗೆ ಸೌಮ್ಯ ಪೊಲೀಸರಿಗೆ ನಾಪತ್ತೆ ದೂರು ಕೂಡ ನೀಡಿರಲಿಲ್ಲ.

ಡಿಸೆಂಬರ್ 15 ರಂದು ನಾಲೆಯಲ್ಲಿ ಶವ ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿ ಶವ ಪತ್ತೆಯಾದ ಮೇಲೆ ಪೊಲೀಸರು ಮೃತನ ಪತ್ತೆ ಕಾರ್ಯ ಕೈಗೊಂಡರು. ತರುವಾಯ ಕೆಲವು ಸಂಶಯದ ಮೇಲೆ ಸೌಮ್ಯಳನ್ನು ವಿಚಾರಣೆಗೊಳಪಡಿಸಿದಾಗ ಆಕೆ ಯೋಗೇಶ್ ಮತ್ತು ಚಲುವರಾಜ್ ಜೊತೆ ಸೇರಿ ಕೊಲೆ ಮಾಡಿರವುದಾಗಿ ಒಪ್ಪಿಕೊಂಡಳು.

ಮಾಡಿದ ಪಾಪಕ್ಕೆ ಸೌಮ್ಯ, ಯೋಗೇಶ್ ಮತ್ತು ಚಲುವರಾಜು ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಾ ಕಂಬಿ ಎಣಿಸುತ್ತಿದ್ದಾರೆ.

TRENDING