Sunday, June 13, 2021
Homeಸುದ್ದಿ ಜಾಲಏಳು ಮಕ್ಕಳಿಗೆ ಜೀವ ಕೊಟ್ಟು ಪ್ರಾಣ ಬಿಟ್ಟ ಮಗು!

ಇದೀಗ ಬಂದ ಸುದ್ದಿ

ಏಳು ಮಕ್ಕಳಿಗೆ ಜೀವ ಕೊಟ್ಟು ಪ್ರಾಣ ಬಿಟ್ಟ ಮಗು!

ಸೂರತ್​: ಎರಡೂವರೆ ವರ್ಷದ ಮಗುವೊಂದು ತಾನು ಉಸಿರು ನಿಲ್ಲುಸುವುದಕ್ಕೂ ಮೊದಲು ಏಳು ಮಕ್ಕಳಿಗೆ ಜೀವ ನೀಡಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಮಗುವಿನ ಅಂಗಾಂಗಳನ್ನು ಏಳು ಮಕ್ಕಳಿಗೆ ದಾನ ಮಾಡಲಾಗಿದ್ದು, ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಆತ ಹೊರಹೊಮ್ಮಿದ್ದಾನೆ.

ಸೂರತ್​ನ ಸಂಜೀವ್​ ಓಜಾ ಮತ್ತು ಅರ್ಚನಾ ಅವರ 2.5 ವರ್ಷ ವಯಸ್ಸಿನ ಮಗ ಜಾಶ್​ ಓಜಾ ಡಿಸೆಂಬರ್​ 9ರಂದು ಸಂಬಂಧಿಕರ ಮನೆಯ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದನು. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವವಾದ ಹಿನ್ನೆಲೆ ಬಾಲಕನ ಮೆದುಳು ಡಿಸೆಂಬರ್​ 14ರಂದು ಕೆಲಸ ನಿಲ್ಲಿಸಿದೆ. ಬಾಲಕನಲ್ಲಿ ಉಸಿರಾಟವಿತ್ತಾದರೂ ಆತನ ಮೆದುಳು ಸಂಪೂರ್ಣ ಸ್ತಬ್ಧವಾಗಿದೆ.

 ಮಗ ಇನ್ನು ಬದುಕುವುದಿಲ್ಲ ಎನ್ನುವುದು ತಿಳಿದ ನಂತರ ಸಂಜೀವ್​ ದಂಪತಿ ಆತನ ದೇಹದ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಅದರಂತೆ ಮಗುವಿನ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಯಕೃತ್​, ಕಣ್ಣನ್ನು ದಾನ ಮಾಡಲಾಗಿದೆ.

 ಶ್ವಾಸಕೋಶ ಮತ್ತು ಹೃದಯವನ್ನು ಸೂರತ್​ನಿಂದ 160 ಕಿ.ಮೀ ದೂರದ ಚೆನ್ನೈಗೆ ಹೆಲಿಕಾಫ್ಟರ್​ ಮೂಲಕ ಸಾಗಿಸಲಾಗಿದೆ. ರಷ್ಯಾದ ನಾಲ್ಕು ವರ್ಷದ ಮಗುವಿಗೆ ಜಾಶ್​ನ ಹೃದಯವನ್ನು ಅಳವಡಿಸಲಾಗಿದೆ. ಉಕ್ರೇನ್​ನ ನಾಲ್ಕು ವರ್ಷದ ಮಗುವಿಗೆ ಜಾರ್ಶ್ನ ಶ್ವಾಸಕೋಶಗಳನ್ನು ಕಸಿ ಮಾಡಲಾಗಿದೆ. ಮೂತ್ರಪಿಂಡಗಳನ್ನು 265 ಕಿ.ಮೀ ದೂರದ ಅಹಮದಾಬಾದ್​ಗೆ ರವಾನಿಸಲಾಗಿದ್ದು, ಅಲ್ಲಿ 13 ವರ್ಷ ಮತ್ತು 17 ವರ್ಷದ ಇಬ್ಬರು ಬಾಲಕಿಯರಿಗೆ ಕಸಿ ಮಾಡಲಾಗಿದೆ. ಎರಡು ವರ್ಷದ ಬಾಲಕಿಗೆ ಜಾಶ್​ನ ಯಕೃತ್​​ನ್ನು ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img