Monday, January 18, 2021
Home ಕೋವಿಡ್-19 ಕೋವಿಡ್ -19 ಗೆ ಮಾಜಿ ಬಿಜೆಪಿ ಸಂಸದ ಸತ್ಯದೇವ್ ಸಿಂಗ್ ನಿಧನ

ಇದೀಗ ಬಂದ ಸುದ್ದಿ

ಕೋವಿಡ್ -19 ಗೆ ಮಾಜಿ ಬಿಜೆಪಿ ಸಂಸದ ಸತ್ಯದೇವ್ ಸಿಂಗ್ ನಿಧನ

 ಗೋಂಡಾ (ಯುಪಿ), ಡಿ.17- ಬಿಜೆಪಿ ಮಾಜಿ ಸಂಸದ ಮತ್ತು ಪಕ್ಷದ ಹಿರಿಯ ಮುಖಂಡ ಸತ್ಯದೇವ್ ಸಿಂಗ್ (75 ) ಗುರಗಾಂವ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಗುರಗಾಂವ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇವರಿಗೆ ಇಬ್ಬರು ಗಂಡು ಮತ್ತು ಮೂವರು ಪುತ್ರಿಯಾರಿದ್ದು, ಡಿ.5ರಂದು ಅವರ ಪತ್ನಿ ಸರೋಜ್ ರಾಣಿ ಸಿಂಗ್ ಲಕ್ನೋದ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು,. 1977ರಲ್ಲಿ ಗೊಂಡಾದಿಂದ ಭಾರತೀಯ ಲೋಕದಾಲ್ ಸಂಸದರಾಗಿ ಆಯ್ಕೆಯಾದರು ಮತ್ತು 1991 ಮತ್ತು 1996 ರಲ್ಲಿ ಬಲರಾಂಪುರದಿಂದ ಬಿಜೆಪಿ ಸಂಸದರಾಗಿದ್ದರು.

ಪ್ರಸ್ತುತ ಬಿಜೆಪಿ ಶಿಸ್ತು ಸಮಿತಿಯ ರಾಜ್ಯ ಅಧ್ಯಕ್ಷರಾಗಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿ ಕಾರ್ಯನಿರ್ವಸುತ್ತಿದ್ದರು. ಅವರು 1980 ಮತ್ತು 1985 ರ ನಡುವೆ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಸತ್ಯದೇವ್ ಸಿಂಗ್ ನಿದಾನಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಹಿರಿಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

TRENDING