ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವ್ರಿಗೆ ಕೊರೊನಾ ಟೆಸ್ಟ್ʼಗೆ ಒಳಗಾಗಿದ್ದು, ಸೋಂಕು ದೃಢಪಟ್ಟಿದೆ. ‘ಅಧ್ಯಕ್ಷರು ಇಂದು (ಗುರುವಾರ) ಕೋವಿಡ್-19ಗೆ ಸೋಂಖಿಗೆ ಒಳಗಾಗಿರುವ ವಿಷ್ಯ ದೃಢಪಟ್ಟಿದೆ ಎಂದು ಫ್ರೆಂಚ್ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಗಾಗಿದ್ರು‘ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಫ್ರಾನ್ಸ್ ನಲ್ಲಿ ರಾಷ್ಟ್ರೀಯ ನಿಯಮಗಳನ್ನ ಪಾಲಿಸಿಕೊಂಡು ಮ್ಯಾಕ್ರೋನ್ ಅವ್ರು ಏಳು ದಿನಗಳ ಕಾಲ ಸ್ವಯಂ ಕ್ವಾರಟೈಂನ್ ಆಗಲಿದ್ದಾರೆ’ ಎಂದು ಹೇಳಲಾಗ್ತಿದ್ದು, ಅವ್ರು ದೂರದಿಂದಲೇ ತಮ್ಮ ಕೆಲಸ ಕಾರ್ಯಗಳನ್ನ ಮುಂದುವರಿಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.