Sunday, January 24, 2021
Home ಸುದ್ದಿ ಜಾಲ `ವಾಟ್ಸಪ್' ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

`ವಾಟ್ಸಪ್’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ : ವಾಟ್ಸಪ್ ಸಂಸ್ಥೆ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮುಂಬರುವ ದಿನಗಳಲ್ಲಿ ವಾಟ್ಸಪ್ ವಿಮೆ ಮತ್ತು ಪಿಂಚಣಿಯಂತಹ ಪ್ರಮುಖ ಸೇವೆಗಳನ್ನು ಹೊರತರಲು ಮುಂದಾಗಿದೆ.

ಹೌದು, ಭಾರತದಲ್ಲಿ ತನ್ನ ಬಳಕೆದಾರರಿಗೆ ಹಣಕಾಸು ಸೇವೆಗಳಿಗೆ ವ್ಯಾಪಾಕ ಅವಕಾಶವನ್ನು ಒದಗಿಸಲು ಈ ವರ್ಷದ ಅಂತ್ಯದ ವೇಳೆಗೆ ಸ್ಯಾಚೆಟ್ ಗಾತ್ರದ ಆರೋಗ್ಯ ವಿಮೆಯನ್ನು ತನ್ನ ಪ್ಲಾಟ್ ಫಾರ್ಮ್ ಮೂಲಕ ಖರೀದಿಸಲು ಅನುಕೂಲವಾಗಲಿದೆ ಎಂದು ವಾಟ್ಸಪ್ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ವಾಟ್ಸಪ್ ನ ಭಾರತ ಮುಖ್ಯಸ್ಥ ಅಭಿಜಿತ್ ಬೋಸ್, 40 ಕೋಟಿ ಸಕ್ರಿಯ ಬಳಕೆದಾರರಿಗೆ ಬಹುಮುಖಿ ಸೇವೆಗಳು ಸರಳ, ವಿಶ್ವಾಸಾರ್ಹ, ಸುರಕ್ಷಿತವಾಗಿ ದೊರೆಯಬೇಕು ಎಂಬ ಉದ್ದೇಶ ಹೊಂದಲಾಗಿದೆ. ಹೀಗಾಗಿ ಹೊಸ ಸೇವೆಯನ್ನು ಈ ತಿಂಗಳ ಅಂತ್ಯದಲ್ಲಿ ಆರಂಭಿಸಲಾಗುತ್ತದೆ. ಡಿಜಿಟಲೀಕರಣ ಹೆಚ್ಚಳದ ಜೊತೆಗೆ ಭಾರತದ ಸಣ್ಣ ವ್ಯಾಪಾರದ ವ್ಯವಸ್ಥೆ ವೃದ್ಧಿಸುವ ಗುರಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

TRENDING