Sunday, January 24, 2021
Home ಜಿಲ್ಲೆ ಕೋಲಾರ ವಿಸ್ಟ್ರಾನ್ ಟವರ್ ಹಿಂಸಾಚಾರ: ಕಂಪನಿಗಾದ ನಷ್ಟವೆಷ್ಟು ಗೊತ್ತಾ.?

ಇದೀಗ ಬಂದ ಸುದ್ದಿ

ವಿಸ್ಟ್ರಾನ್ ಟವರ್ ಹಿಂಸಾಚಾರ: ಕಂಪನಿಗಾದ ನಷ್ಟವೆಷ್ಟು ಗೊತ್ತಾ.?

ಕೋಲಾರದ ವಿಸ್ಟ್ರಾನ್​ ಟವರ್​ನಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಸಾವಿರಾರು ಐ ಫೋನ್​ಗಳನ್ನ ಲೂಟಿ ಮಾಡಿದ್ದರಿಂದ 440 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪನಿ ಹೇಳಿದೆ.

ಕಂಪನಿ, ಪೊಲೀಸ್​ ಹಾಗೂ ಕಾರ್ಮಿಕ ಇಲಾಖೆಗೆ ನೀಡಿದ ದೂರಿನಲ್ಲಿ ಈ ಮಾಹಿತಿಯನ್ನ ಹಂಚಿಕೊಂಡಿದೆ ಎಂದು ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ. ಐಫೋನ್​ಗಳನ್ನ ತಯಾರಿಸುವ ಕಾರ್ಖಾನೆ ಕಾರ್ಮಿಕರಿಗೆ ಸಂಬಳ ಪಾವತಿಸದ ಕಾರಣ ಕಂಪನಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಕಾರ್ಖಾನೆ ಕೋಲಾರ ಜಿಲ್ಲೆಯ ನರಸಾಪುರದಲ್ಲಿದೆ.

ಕೋಲಾರ ಜಿಲ್ಲೆಯ ನರಸಪುರದ ಕೈಗಾರಿಕಾ ಪ್ರದೇಶದಲ್ಲಿನ ನೌಕರರು ಕಾರ್ಖಾನೆಗೆ ನುಗ್ಗಿ ಸಂಬಳ ಪಾವತಿಸದ ಕಾರಣ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೇತನ ಬಾಕಿ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದ ನೌಕರರು ಕಳೆದ ನಾಲ್ಕು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದ್ದಾರೆ.

TRENDING