Monday, January 18, 2021
Home ರಾಜ್ಯ ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯಾದ್ಯಂತ ಮನೆಬಾಗಿಲಿಗೆ ಪಿಂಚಣಿದಾರರಿಗೆ ಪೆನ್ಷನ್ ತಲುಪಿಸಲಾಗುತ್ತದೆ.

ಇದುವರೆಗೆ ಅರ್ಜಿಸಲ್ಲಿಸದೇ ಇದ್ದರೂ ಕೂಡ ಪಿಂಚಣಿ ಹಣ ಪಡೆಯಲು ಅರ್ಹರಾಗಿದ್ದಾರೆ ಅಂತಹ ಪಿಂಚಣಿದಾರರಿಗೆ ಮನೆಬಾಗಿಲಿಗೆ ಸಿಬ್ಬಂದಿ ಆಗಮಿಸಿ ದಾಖಲೆ ಪಡೆಯಲಿದ್ದಾರೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಿಬ್ಬಂದಿ, ಗ್ರಾಮಲೆಕ್ಕಿಗರು, ಪಿಂಚಣಿ ನಿರ್ದೇಶನಾಲಯದ ಸಿಬ್ಬಂದಿ ಸಹಯೋಗದಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ದಾಖಲೆ ಪಡೆಯಲಿದ್ದಾರೆ. ಬಳಿಕ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆದು, ಆಧಾರ್ ಜೋಡಣೆ ಮಾಡಿ ಪಿಂಚಣಿ ತಲುಪಿಸಲಾಗುವುದು.

ವೃದ್ಧರು, ವಿಕಲಚೇತನರು ಸೇರಿದಂತೆ ಎಲ್ಲಾ ಪಿಂಚಣಿದಾರರಿಗೆ ಮಂಜೂರಾತಿ ಪತ್ರ ನೀಡಿ ಅವರ ಖಾತೆಗೆ ನೇರವಾಗಿ ಹಣ ತಲುಪಿಸಲಾಗುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಅರ್ಹರಲ್ಲದವರು ಕೂಡ ಪಿಂಚಣಿ ಪಡೆಯುತ್ತಿರುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದೆ. ಅಲ್ಲದೇ ವೃದ್ಧರಿಗೆ ತೊಂದರೆಯಾಗದಂತೆ ಮನೆ ಬಾಗಿಲಲ್ಲೇ ಸೇವೆ ನೀಡಲಾಗುವುದು.

ವೃದ್ಧರು, ವಿಧವೆಯರು, ವಿಕಲಚೇತನರು ಸೇರಿದಂತೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಹಣವನ್ನು ತಲುಪಿಸುವ ಉದ್ದೇಶದಿಂದ ಮನೆಬಾಗಿಲಿಗೆ ಪಿಂಚಣಿ ಸೇವೆ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯಲ್ಲಿ ಯೋಜನೆ ಆರಂಭವಾಗಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ರಾಜ್ಯದ್ಯಂತ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.

TRENDING