Sunday, June 13, 2021
Homeದೆಹಲಿಬಾಂಗ್ಲಾ ವಿಮೋಚನೆ ಯುದ್ಧಕ್ಕೆ 50 ವರ್ಷ: ಸ್ವರ್ಣಿಮ್ ವಿಜಯ್ ಮಾಷಲ್ ಬೆಳಗಿದ ಪ್ರಧಾನಿ ಮೋದಿ

ಇದೀಗ ಬಂದ ಸುದ್ದಿ

ಬಾಂಗ್ಲಾ ವಿಮೋಚನೆ ಯುದ್ಧಕ್ಕೆ 50 ವರ್ಷ: ಸ್ವರ್ಣಿಮ್ ವಿಜಯ್ ಮಾಷಲ್ ಬೆಳಗಿದ ಪ್ರಧಾನಿ ಮೋದಿ

ನವದೆಹಲಿ: ಬಾಂಗ್ಲಾ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧಕ್ಕೆ ಈಗ 50 ವರ್ಷ. ಬಾಂಗ್ಲಾ ವಿಮೋಚನೆಗೆ ಕಾರಣವಾದ ಯುದ್ಧದ ಗೆಲುವಿನ ಸ್ವರ್ಣ ಸಂಭ್ರಮಾಚರಣೆಯ ಸನ್ನಿವೇಶವಿದು. ಭಾರತೀಯ ಸೇನೆ ಸ್ವರ್ಣಿಮ್ ವಿಜಯ್ ದಿವಸ್ ಆಗಿ ಆಚರಿಸುತ್ತಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ್ ಮಾಷಲ್ (ಜ್ಯೋತಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗಿದರು. ಈ ಮೂಲಕ ಸ್ವರ್ಣಿಮ್ ವಿಜಯ ವರ್ಷ ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಿದರು.

ನಾಲ್ಕು ವಿಜಯ ಜ್ಯೋತಿಗಳು

ಪ್ರಧಾನಿ ಮೋದಿಯವರು ಇಂದು ಬೆಳಗಿದ ನಾಲ್ಕು ಜ್ಯೋತಿಗಳು ಒಂದು ವರ್ಷ ಕಾಲ ದೇಶಾದ್ಯಂತ ಸಂಚರಿಸಲಿವೆ. ಯುದ್ಧದಲ್ಲಿ ಭಾಗಿಯಾದ ಸಮರ ವೀರರಾದ ಪರಮ್ ವೀರ ಚಕ್ರ ಪುರಸ್ಕೃತರು ಮತ್ತು ಮಹಾವೀರ ಚಕ್ರ ಪುರಸ್ಕೃತರ ಗ್ರಾಮಗಳಿಗೂ ಜ್ಯೋತಿ ತಲುಪಲಿದೆ ವೀರ ಯೋಧರ ತವರಿನ ಮಣ್ಣನ್ನು ಜ್ಯೋತಿಯೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತರಲಾಗುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ್ದು, ಸ್ವರ್ಣಿಮ್ ವಿಜಯ ದಿವಸದ ಲಾಂಛನವನ್ನು ಬಿಡುಗಡೆ ಮಾಡಿದರು. ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥರು ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡರು. ಹುತಾತ್ಮ ವೀರ ಯೋಧರಿಗೆ ಪ್ರಧಾನಿ ಮೋದಿ ಇದೇ ವೇಳೆ ಗೌರವ ಸಲ್ಲಿಸಿದರು.

ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ಎರಡನೇ ವಿಶ್ವ ಮಹಾಯುದ್ಧದ ನಂತರದಲ್ಲಿ 1971ರಲ್ಲಿ ನಡೆದ ಯುದ್ಧ ಇದಾಗಿದ್ದು, ಇದರಲ್ಲಿ ಪಾಕಿಸ್ತಾನ ಸೇನೆ ವಿರುದ್ಧ ಭಾರತೀಯ ಸೇನೆ ನಿರ್ಣಾಯಕ ಗೆಲುವು ಸಾಧಿಸಿತು. ಹೊಸ ರಾಷ್ಟ್ರವಾಗಿ ಬಾಂಗ್ಲಾದೇಶದ ಉದಯಕ್ಕೂ ಇದು ಕಾರಣವಾಗಿದೆ. ಇಂದಿನಿಂದ ಒಂದು ವರ್ಷ ಕಾಲ ಸ್ವರ್ಣಿಮ್ ವಿಜಯ ವರ್ಷ ಆಚರಿಸಲ್ಪಡಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img