Sunday, June 13, 2021
Homeಅಂತರ್ ರಾಷ್ಟ್ರೀಯಇಂಗ್ಲೆಂಡ್ ನಲ್ಲಿ ಹೊಸ ರೀತಿಯ ಕೊರೊನಾ ವೈರಸ್ ಪತ್ತೆ: 1000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು

ಇದೀಗ ಬಂದ ಸುದ್ದಿ

ಇಂಗ್ಲೆಂಡ್ ನಲ್ಲಿ ಹೊಸ ರೀತಿಯ ಕೊರೊನಾ ವೈರಸ್ ಪತ್ತೆ: 1000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು

ಲಂಡನ್: ಇಂಗ್ಲೆಂಡ್‌ನಲ್ಲಿ ಹೊಸ  ರೀತಿಯ ಕೊರೊನಾ ವೈರಸ್‌ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ 1000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಕಂಡುಬಂದಿವೆ ಎಂದು ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್‌ಕಾಕ್‌ ತಿಳಿಸಿದ್ದಾರೆ.

ದಕ್ಷಿಣ ಇಂಗ್ಲೆಂಡ್​ನಲ್ಲಿ ಈ ಹೊಸ ಸೋಂಕು ಹರಡುತ್ತಿದೆ, ಸದ್ಯ ಈಗಿರುವ ಕೊರೊನಾ ವೈರಸ್​ಗಿಂತಲೂ, ರೂಪಾಂತರಗೊಂಡಿರುವ ಈ ವೈರಸ್​ ಅತ್ಯಂತ ವೇಗವಾಗಿ ಹರಡುತ್ತಿದೆ ಅಂತ ಗೊತ್ತಾಗಿದೆ. ಈ ಹೊಸ ಮಾದರಿಯ ಕೊರೊನಾ ವೈರಸ್​ ಗಂಭೀರ ಆರೋಗ್ಯ ಸಮಸ್ಯೆಗಳನ್ನ ಸೃಷ್ಟಿಸಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆ ಇಂದಿನಿಂದ ಲಂಡನ್​​ ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಕಠಿಣ ಲಾಕ್​ಡೌನ್​ ಜಾರಿಯಾಗಲಿದೆ. ಥೀಯೇಟರ್, ಪಬ್ ಹಾಗೂ ಬಾರ್​ಗಳು ಕ್ಲೋಸ್​ ಆಗಲಿವೆ. ರೆಸ್ಟೊರೆಂಟ್​ನಲ್ಲಿ ಪಾರ್ಸೆಲ್​ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ 6 ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img