Sunday, June 13, 2021
Homeಸುದ್ದಿ ಜಾಲ'ಆಧಾರ್' ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಇದೀಗ ಬಂದ ಸುದ್ದಿ

‘ಆಧಾರ್’ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

2020ರಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನ ಕೇಂದ್ರ ಹಣಕಾಸು ಸಚಿವಾಲಯ ಪಟ್ಟಿ ಮಾಡಿದೆ. ಕೋವಿಡ್​ 19 ಹಿನ್ನೆಲೆ ಅನೇಕ ಪ್ರಮುಖ ದಾಖಲೆಗಳನ್ನ ಆನ್​​ಲೈನ್​​ನಲ್ಲೇ ಪಡೆಯಲು ಕೇಂದ್ರ ಸರ್ಕಾರ ಈ ಬಾರಿ ಅವಕಾಶ ಮಾಡಿಕೊಟ್ಟಿದೆ.

ಪಾನ್​ ಕಾರ್ಡ್​ನ್ನು ಆಧಾರ್ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ ಗಡುವನ್ನ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಜೂನ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಪ್ಯಾನ್​ ಕಾರ್ಡ್​ನ್ನು ಆಧಾರ್​ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ ದಿನಾಂಕವನ್ನ ಮಾರ್ಚ್​ 31, 2021ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಪಾನ್​​ ಕಾರ್ಡ್​ನ್ನ ಆಧಾರ್​ ಕಾರ್ಡ್​ಗೆ ಲಿಂಕ್​ ಮಾಡಲು ಜೂನ್​ 30, 2020ರವರೆಗೆ ಗಡುವು ನೀಡಲಾಗಿತ್ತು.

ನೀವು ಇಲ್ಲಿಯವರೆಗೆ ಪಾನ್​ನೊಂದಿಗೆ ಆಧಾರ್​ ಕಾರ್ಡ್ ಲಿಂಕ್​ ಮಾಡದೇ ಇದ್ದರೆ, ಈ ಪ್ರಕ್ರಿಯೆಯನ್ನ ನೀವು ಆನ್​ಲೈನ್​ನಲ್ಲೇ ಮಾಡಬಹುದಾಗಿದೆ.

ಪ್ಯಾನ್​ ಹಾಗೂ ಆಧಾರ್​ ಕಾರ್ಡ್​ಗಳನ್ನ ಲಿಂಕ್​ ಮಾಡುವ ಮೊದಲು ತೆರಿಗೆ ಪಾವತಿದಾದದರು ತೆರಿಗೆ ಇ ಫೈಲಿಂಗ್​ ಪೋರ್ಟಲ್​​ನಲ್ಲಿ ನೋಂದಾಯಿಸಿಕೊಳ್ಳಬೇಕು. ಲಾಗ್​ ಇನ್​ ಐಡಿ, ಪಾಸ್​ವರ್ಡ್ ಹಾಗೂ ಹುಟ್ಟಿದ ದಿನಾಂಕವನ್ನ ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ ಫೈಲಿಂಗ್​​ ಪೋರ್ಟಲ್​​ಗೆ ಲಾಗ್​ ಇನ್​ ಮಾಡಿ.

ಈ ಎಲ್ಲ ವಿವರಗಳನ್ನ ನೀಡಿದ ಬಳಿಕ ನಿಮಗೆ ಕೋಡ್​​ ಒಂದು ಸಿಗಲಿದೆ. ಈ ಸೈಟ್​ಗೆ ಲಾಗಿನ್​ ಆಗುವ ವೇಳೆ ನಿಮಗೆ ಪಾಪ್​ಅಪ್​ ವಿಂಡೋ ಕಾಣಿಸುತ್ತೆ. ನಿಮ್ಮ ಪಾನ್​ ಕಾರ್ಡ್​ನ್ನು ಆಧಾರ್​ನೊಂದಿಗೆ ಲಿಂಕ್​ ಮಾಡಲು ಕೇಳುತ್ತದೆ. ಇಲ್ಲವಾದಲ್ಲಿ ನೀವು ಫ್ರೊಫೈಲ್​ ಸೆಟ್ಟಿಂಗ್​​ಗೆ ಹೋಗಿ ಲಿಂಕ್​ ಆಧಾರ್​ ಬಟನ್​ ಆಯ್ಕೆ ಮಾಡಬಹುದಾಗಿದೆ.

ಆಧಾರ್​ ಕಾರ್ಡ್​ನಲ್ಲಿ ನಮೂದಿಸಿರುವ ವಿವರಗಳೊಂದಿಗೆ ಪರದೆಯ ಮೇಲಿರುವ ವಿವರಗಳನ್ನ ಪರಿಶೀಲನೆ ಮಾಡಿ. ವಿವರಗಳು ಹೊಂದಿಕೆಯಾದ ಬಳಿಕ ಆಧಾರ್​ ಕಾರ್ಡ್​ ಸಂಖ್ಯೆ ನಮೂದಿಸಿ ಹಾಗೂ ಲಿಂಕ್​ ಬಟನ್​ ಕ್ಲಿಕ್​ ಮಾಡಿ.

ನಿಮ್ಮ ಆಧಾರ್​ ಕಾರ್ಡ್​ನ್ನು ಪಾನ್​ ಕಾರ್ಡ್​ಗೆ ಯಶಸ್ವಿಯಾಗಿ ಲಿಂಕ್​ ಮಾಡಲಾಗಿದೆ ಎಂಬ ಸಂದೇಶವನ್ನ ನೀವು ಪಡೆಯುತ್ತೀರಾ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img