Saturday, January 16, 2021
Home ರಾಜ್ಯ ಗ್ರಾ. ಪಂ ಚುನಾವಣೆ: ಅಂತಿಮ ಕಣದಲ್ಲಿ 2,466 ಅಭ್ಯರ್ಥಿಗಳು

ಇದೀಗ ಬಂದ ಸುದ್ದಿ

ಗ್ರಾ. ಪಂ ಚುನಾವಣೆ: ಅಂತಿಮ ಕಣದಲ್ಲಿ 2,466 ಅಭ್ಯರ್ಥಿಗಳು

ಯಾದಗಿರಿ: ಡಿ. 22ರಂದು ನಡೆಯುವ ಮೊದಲ ಹಂತದ ಚುನಾವಣೆಯ 1,247 ಸ್ಥಾನಗಳಲ್ಲಿ 220 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಅಂತಿಮ ಕಣದಲ್ಲಿ 2,466 ಅಭ್ಯರ್ಥಿಗಳು ಉಳಿದಿದ್ದಾರೆ.

22 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿವೆ. ಶಹಾಪುರ ತಾಲ್ಲೂಕಿನಲ್ಲಿ 20, ಹುಣಸಗಿ ತಾಲ್ಲೂಕಿನಲ್ಲಿ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಆಗಿಲ್ಲ. ಹೀಗಾಗಿ ಇವು ಖಾಲಿ ಉಳಿದಿವೆ.

1,005 ಸ್ಥಾನಗಳಿಗೆ ನಡೆಯುವ ಚುನಾವಣೆ: ಮೂರು ತಾಲ್ಲೂಕುಗಳಲ್ಲಿ ಮೊದಲ ಹಂತದ ಚುನಾವಣಾ ಕಣ ಸಿದ್ದವಾಗಿದ್ದು, 1,005 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಶಹಾಪುರ ತಾಲ್ಲೂಕಿನ 394, ಸುರಪುರ ತಾಲ್ಲೂಕಿನ 325, ಹುಣಸಗಿ ತಾಲ್ಲೂಕಿನ 286 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಶಹಾಪುರ, ಹುಣಸಗಿ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವಿರೋಧ ಆಯ್ಕೆಯಾಗಿದ್ದರೆ ಸುರಪುರ ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಮೊದಲ ಹಂತದಲ್ಲಿರುವ ಸ್ಥಾನಗಳು: ಶಹಾಪುರ ತಾಲ್ಲೂಕಿನ 495, ಸುರಪುರ ತಾಲ್ಲೂಕಿನ 383, ಹುಣಸಗಿ ತಾಲ್ಲೂಕಿನ 369 ಸೇರಿದಂತೆ 1,247 ಸ್ಥಾನಗಳಿವೆ.

ಶಹಾಪುರ ತಾಲ್ಲೂಕಿನಲ್ಲಿ 24, ಸುರಪುರ ತಾಲ್ಲೂಕಿನಲ್ಲಿ 21, ಹುಣಸಗಿ ತಾಲ್ಲೂಕಿನಲ್ಲಿ 18 ಸೇರಿದಂತೆ ಒಟ್ಟಾರೆ 63 ಗ್ರಾಮ ಪಂಚಾಯಿತಿಗಳಿವೆ.

ಅಭ್ಯರ್ಥಿಗಳ ವರ್ಗಾವಾರು ವಿವರ: ಪರಿಶಿಷ್ಟ ಜಾತಿ 677, ‍ಪರಿಶಿಷ್ಟ ಪಂಗಡದ 413, ಹಿಂದುಳಿದ ಅ ವರ್ಗ 174, ಹಿಂದುಳಿದ ಬಿ ವರ್ಗ 37, ಸಾಮಾನ್ಯ ವರ್ಗ 1,165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ: ಮೊದಲ ಹಂತದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅಂತಿಮವಾಗಿದ್ದು, ಈಗಗಾಲೇ ಅವರ ಆಯ್ಕೆಯ ಚಿನ್ಹೆಗಳನ್ನು ಆಯಾ ಗ್ರಾಮ ಪಂಚಾಯಿತಿ ಚುನಾವಣಾ ಅಧಿಕಾರಿ ನೀಡಿದ್ದಾರೆ. ಇವುಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿ ತಮ್ಮ ಪರವಾಗಿ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು, ಕುಟುಂಬದವರು, ಬೆಂಗಲಿಗರು ತೊಡಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತವಾಗಿದ್ದರೂ ಆಯಾ ರಾಜಕೀಯ ಪಕ್ಷಗಳ ಬೆಂಬಲ ಪಡೆದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.

ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಣ ರಂಗೇರಿದ್ದು, ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

ಅಂಕಿ ಅಂಶ
ಅವಿರೋಧ ಆಯ್ಕೆ ಪಟ್ಟಿ
ಶಹಾಪುರ;81
ಸುರಪುರ;58
ಹುಣಸಗಿ;81
ಒಟ್ಟು;220

ಮೊದಲ ಹಂತದ ಚುನಾವಣೆಗೆ 4,086 ‌ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ 2,466 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ

TRENDING